Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಇಸ್ರೋ ಅಧ್ಯಕ್ಷರನ್ನು ಅಪ್ಪಿ ಸಂತೈಸಿದ ಫೋಟೋಕ್ಕೆ ನಾನಾ ರೂಪ!

ಪ್ರಧಾನಿ ಮೋದಿ
ಬೆಂಗಳೂರು , ಭಾನುವಾರ, 8 ಸೆಪ್ಟಂಬರ್ 2019 (07:05 IST)
ಬೆಂಗಳೂರು: ಚಂದ್ರಯಾನ 2 ವಿಫಲವಾದ ಬೇಸರದಲ್ಲಿ ಪ್ರಧಾನಿ ಮೋದಿಯವರನ್ನು ತಬ್ಬಿ ಕಣ್ಣೀರು ಮಿಡಿದಿದ್ದ ಇಸ್ರೋ ಅಧ್ಯಕ್ಷ ಕೆ ಶಿವನ್ ಫೋಟೋ ವೈರಲ್ ಆಗಿತ್ತು.


ತಮ್ಮನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅತ್ತ ಶಿವನ್ ರನ್ನು ಪ್ರಧಾನಿ ಮೋದಿ ಆಲಂಗಿಸಿಕೊಂಡು ಬೆನ್ನು ತಟ್ಟಿ ಸಂತೈಸಿದ ಕ್ಷಣ ಎಲ್ಲಾ ಕಡೆ ಹರಿದಾಡಿತ್ತು. ಪ್ರಧಾನಿ ಮೋದಿ ನಡೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಒಬ್ಬ ನಾಯಕ ಆದವನು ಇಂತಹ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಮೋದಿ ತೋರಿಸಿಕೊಟ್ಟರು ಎಂದು ನೆಟ್ಟಿಗರು ಹೊಗಳಿದ್ದಾರೆ.

ಅದೇನೇ ಇದ್ದರೂ ಆ ಫೋಟೋಗೆ ಈಗ ಮತ್ತಷ್ಟು ಹೊಸ ರೂಪ ನೀಡಿ ನೆಟ್ಟಿಗರು ಹರಿಯಬಿಟ್ಟಿದ್ದಾರೆ. ಇಡೀ ಭಾರತ ದೇಶವೇ ಕೆ ಶಿವನ್ ರನ್ನು ತಬ್ಬಿಕೊಂಡು ಸಂತೈಸುತ್ತಿರುವಂತಹ ಚಿತ್ರಗಳನ್ನು ಬರೆದು ಸೋಷಿಯಲ್ ಮೀಡಿಯಾ ಮೂಲಕ ವಿಜ್ಞಾನಿಗಳ ಸಾಧನೆಗೆ ಬೆಂಬಲವಾಗಿ ನಿಂತಿದ್ದೇವೆಂದು ಹಲವರು ಸಂದೇಶ ನೀಡುತ್ತಿದ್ದಾರೆ. ನಿಜಕ್ಕೂ ಇದು ವಿಜ್ಞಾನಿಗಳಿಗೆ ಹೊಸ ಸ್ಪೂರ್ತಿ ನೀಡಲಿರುವುದಂತೂ ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಘಟಪ್ರಭೆ ಭೋರ್ಗರೆತಕ್ಕೆ ಜನಜೀವನ ತತ್ತರ