Select Your Language

Notifications

webdunia
webdunia
webdunia
webdunia

ದೇಶದ ಅತಿ ಉದ್ದದ ಧೋಲಾ-ಸಾದಿಯಾ ಸೇತುವೆ ಲೋಕಾರ್ಪಣೆ

ದೇಶದ ಅತಿ ಉದ್ದದ ಧೋಲಾ-ಸಾದಿಯಾ ಸೇತುವೆ ಲೋಕಾರ್ಪಣೆ
ಅಸ್ಸಾಂ , ಶುಕ್ರವಾರ, 26 ಮೇ 2017 (11:39 IST)
ಅಸ್ಸಾಂ:ದೇಶದ ಅತಿ ಉದ್ದದ ಸೇತುವೆಯಾದ ಬ್ರಹ್ಮಪುತ್ರ ನದಿಗೆ ಕಟ್ಟಿದ ಧೋಲಾ-ಸಾದಿಯಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
 
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ ಡಿಎ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಧೋಲಾ-ಸಾದಿಯಾ ಸೇತುವೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆಗೂ ಚಾಲನೆ ದೊರೆತಿದೆ.
 
ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಅಸ್ಸಾಂನ ಪುರಾನಾ ಸಾದಿಯಾಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು  ಸೇತುವೆ ಉದ್ಘಾಟನೆ ಮಾಡಿದರು. ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ದೇಶದ ಅತಿ ಉದ್ದದ ಸೇತುವೆ ಇದಾಗಿದ್ದು, ಅಸ್ಸಾಂನ ಧೋಲಾ ಮತ್ತು ಸದಿಯಾ ನಡುವೆ ಈ  ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಗಡಿರಾಜ್ಯ ಅರುಣಾಚಲ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಎರಡೂ ರಾಜ್ಯಗಳು ಚೀನಾ ಗಡಿಗೆ ಹೊಂದಿಕೊಂಡಂತೆ ಇರುವುದರಿಂದ ವ್ಯೂಹಾತ್ಮಕವಾಗಿ ಇದು ಅತ್ಯಂತ  ಮಹತ್ವದ್ದಾಗಿದೆ ಎನ್ನಲಾಗಿದೆ.
 
ಸುಮಾರು 9.15 ಕಿ.ಮೀ. ಉದ್ದವಿರುವ ಈ ಸೇತುವೆ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆ (5.6 ಕಿ.ಮೀ.)ಗಿಂತ ಶೇ.30ರಷ್ಟು ಉದ್ದವಾಗಿದೆ. ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ನಾಲ್ಕನೇ ಸೇತುವೆ  ಇದಾಗಿದ್ದು, ಸೇನಾ ಸಿಬ್ಬಂದಿಗೆ ಅಸ್ಸಾಂನಿಂದ ಅರುಣಾಚಲ ಪ್ರದೇಶ-ಚೀನಾ ಗಡಿ ಪ್ರದೇಶದಲ್ಲಿರುವ ಪೋಸ್ಟ್‌ಗಳಿಗೆ ತೆರಳಲು ನೆರವಾಗಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮೂವರು ಯುವಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್ ರೇಪ್