Select Your Language

Notifications

webdunia
webdunia
webdunia
webdunia

ಮಹಿಳೆಯ ಭಾಷಣಕ್ಕೆ ಪಿಎಂ ಮೋದಿ ಫಿದಾ: ಸ್ಥಳದಲ್ಲೇ ಕೊಟ್ಟ ಆಫರ್ ಏನು?!

ಮಹಿಳೆಯ ಭಾಷಣಕ್ಕೆ ಪಿಎಂ ಮೋದಿ ಫಿದಾ: ಸ್ಥಳದಲ್ಲೇ ಕೊಟ್ಟ ಆಫರ್ ಏನು?!
ವಾರಣಾಸಿ , ಮಂಗಳವಾರ, 19 ಡಿಸೆಂಬರ್ 2023 (11:20 IST)
ವಾರಣಾಸಿ: ರಾಜಕಾರಣಿಯಾಗಬೇಕಾದರೆ ಜನರ ಮನಸ್ಸು ಗೆಲ್ಲುವಂತೆ ಅದ್ಭುತವಾಗಿ ಮಾತನಾಡುವ ವಾಕ್ಚತುರರೂ ಆಗಿರಬೇಕು. ಅಂತಹದ್ದೇ ಮಹಿಳೆಯೊಬ್ಬರಿಗೆ ಪ್ರಧಾನಿ ಮೋದಿ ಫಿದಾ ಆಗಿದ್ದಾರೆ.

ವಾರಣಾಸಿಯಲ್ಲಿ ಸರ್ಕಾರೀ ಯೋಜನೆಗಳ ಫಲಾನುಭವಿಗಳ ಜೊತೆ ಸಂವಹನ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ಅದ್ಭುತವಾಗಿ ಮಾತನಾಡಿದ್ದು ಪ್ರಧಾನಿ ಮೋದಿ ಗಮನ ಸೆಳೆದಿದೆ.

ಲಖ್ ಪತಿ ದೀದಿ ಎಂಬ ಯೋಜನೆಯ ಫಲಾನುಭವಿ ಚಂದಾ ದೇವಿ ಎಂಬಾಕೆ ಯೋಜನೆ ಬಗ್ಗೆ ಅದ್ಭುತವಾಗಿ ಮಾತನಾಡಿದ್ದರು. ಅವರ ಭಾಷಣ ಪ್ರಧಾನಿ ಮೋದಿಯವರನ್ನು ಇಂಫ್ರೆಸ್ ಮಾಡಿದೆ.

ಆಕೆಯ ವಾಕ್ಚತುರತೆಯನ್ನು ಹೊಗಳಿದ ಪ್ರಧಾನಿ ಮೋದಿ ಆಕೆಗೆ ಸ್ಥಳದಲ್ಲೇ ಬಿಗ್ ಆಫರ್ ನೀಡಿದ್ದಾರೆ. ‘ನೀವು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರಿ. ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?’ ಎಂದು ಆಫರ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ವಾಜಪೇಯಿಯವರಿಗೆ ಸರಿಸಾಟಿಯಲ್ಲ : ಆಡ್ವಾನಿ