Select Your Language

Notifications

webdunia
webdunia
webdunia
webdunia

ಸೋನಿಯಾಗೆ ಮೋದಿ ಹೆದರುತ್ತಿರುವುದೇಕೆ?: ಕೇಜ್ರಿವಾಲ್ ಸವಾಲು

ಸೋನಿಯಾಗೆ ಮೋದಿ ಹೆದರುತ್ತಿರುವುದೇಕೆ?: ಕೇಜ್ರಿವಾಲ್ ಸವಾಲು
ನವದೆಹಲಿ , ಶನಿವಾರ, 7 ಮೇ 2016 (12:28 IST)
ಆಗಸ್ಟಾ ಹಗರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ತಪ್ಪಿತಸ್ಥರು ಎಂದು ಆರೋಪಿಸುತ್ತಿರುವ ಆಮ್ ಆದ್ಮಿ ಪಕ್ಷ ಎನ್‌ಡಿಎ ಸರ್ಕಾರ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ.
 
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ 2014ರಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮೋದಿ ಅವರು  ಭೃಷ್ಟಾಚಾರಿಗಳನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಎರಡು ವರ್ಷಗಳಾದರೂ ಭೃಷ್ಟಾಚಾರಿಗಳ್ಯಾರೂ ಜೈಲಿಗೆ ಹೋಗಿಲ್ಲ. ಆಗಸ್ಟಾ ಪ್ರಕರಣದ ತನಿಖೆ ಒಂದು ಇಂಚು ಕೂಡ ಮುಂದೆ ಹೋಗಿಲ್ಲ ಎಂದು ಕಿಡಿಕಾರಿದ್ದಾರೆ.
 
ಕಾಂಗ್ರೆಸ್- ಬಿಜೆಪಿ ಸೇರಿ ಭೃಷ್ಟಾಚಾರದ ಮಹಾಮೈತ್ರಿ ಮಾಡಿಕೊಂಡಿದ್ದಾರೆ. ಸೋನಿಯಾ ಗಾಂಧಿಗೆ ಮೋದಿಯವರು ಇಷ್ಟೊಂದು ಹೆದರುತ್ತಿರುವುದೇಕೆ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ರಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿರುವ ಆಪ್‌ನ ನೂರಾರು ಕಾರ್ಯಕರ್ತರು ಸೋನಿಯಾ ಗಾಂಧಿಯವರ ನವದೆಹಲಿಯ ನಿವಾಸದ ಮುಂದೆ ಸಹ ಪ್ರತಿಭಟನೆ ನಡೆಸಿದ್ದಾರೆ.
 
ಜಂತರ್ ಮಂತರ್‌ನಲ್ಲಿ ಜಮಾವಣೆಗೊಂಡಿರುವ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು, ಸೋನಿಯಾ ಅವರನ್ನು ಕೂಡಲೇ ಬಂಧಿಸಲಿ ಎಂದು ಆಗ್ರಹಿಸುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
 
ಆಪ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ಕೂಡ ನಡೆದಿದ್ದು ಪೊಲೀಸರು ಲಾಠಿ ಪ್ರಹಾರವನ್ನು ಸಹ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 1 ರಿಂದ ಮೊಬೈಲ್‌ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ: ಮೇನಕಾ ಗಾಂಧಿ