Select Your Language

Notifications

webdunia
webdunia
webdunia
webdunia

ಜನವರಿ 1 ರಿಂದ ಮೊಬೈಲ್‌ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ: ಮೇನಕಾ ಗಾಂಧಿ

ಜನವರಿ 1 ರಿಂದ ಮೊಬೈಲ್‌ಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ: ಮೇನಕಾ ಗಾಂಧಿ
ನವದಹಲಿ , ಶನಿವಾರ, 7 ಮೇ 2016 (11:49 IST)
ಪ್ರತಿನಿತ್ಯ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಮುಂದಿನ ವರ್ಷದ ಜನೆವರಿ ತಿಂಗಳಿನಿಂದ ಮಹಿಳೆಯರ ಸುರಕ್ಷತೆಗಾಗಿ ಸೆಲ್ ಪೋನ್‌ಗಳಲ್ಲಿ ಪ್ಯಾನಿಕ್ ಬಟನ್‌ ಅಳವಡಿಕೆ ಕಡ್ಡಾಯ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಮಹಿಳಾ ಸುರಕ್ಷತೆ ಸಮಸ್ಯೆಗಳ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವೆ, ಹಿಳೆಯರು ಅಪಾಯದಲ್ಲಿ ಸಿಲುಕಿದ್ದಾಗ ಅಥವಾ ಯಾರಾದರೂ ಕಿರುಕುಳ ನೀಡುವ ಸಂದರ್ಭದಲ್ಲಿ ಪ್ಯಾನಿಕ ಬಟನ್‌ನ್ನು ಪ್ರೆಸ್ ಮಾಡಿದರೆ ಸಾಕು, ಸ್ಥಳೀಯ ಪೋಲಿಸ್ ಠಾಣೆ ಸ್ವಯಂ ಚಾಲಿತವಾಗಿ ಸಂದೇಶ ರವಾನೆಯಾಗುತ್ತದೆ. ಮುಂದಿನ ವರ್ಷದ ಜನೆವರಿ ತಿಂಗಳಿನಿಂದ ಮಹಿಳೆಯರ ಸುರಕ್ಷತೆಗಾಗಿ ಸೆಲ್ ಪೋನ್‌ಗಳಲ್ಲಿ ಪ್ಯಾನಿಕ್ ಬಟನ್‌ ಅಳವಡಿಕೆ ಕಡ್ಡಾಯ ಎಂದು ತಿಳಿಸಿದ್ದಾರೆ.
 
ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾಗ ಅಥವಾ ಯಾರಾದರೂ ಕಿರುಕುಳ ನೀಡುವ ಸಂದರ್ಭದಲ್ಲಿ ಕನಿಷ್ಟ 10 ಜನರಿಗೆ ಸಂದೇಶ ರವಾನೆಯಾಗುವಂತ ಆಪ್ಲಿಕೇಶನ್ ಕೂಡ ಅಭಿವೃದ್ಧಿಯಾಗುತ್ತಿದೆ.
 
ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾಗ ಸ್ಥಳ ಗುರುತಿಸಲು ಸಹಾಯವಾಗುವಂತೆ ಮೊಬೈಲ್ ಪೋನ್‌ಗಳಲ್ಲಿ ಪ್ಯಾನಿಕ ಬಟನ್ ಅಳವಡಿಕೆಯ ಜೊತೆಗೆ ಜಿಪಿಎಸ್ ವೈಶಿಷ್ಟ್ಯ ಅಳವಡಿಕೆ ಕಡ್ಡಾಯ ಎಂದು ತಿಳಿಸಿದ್ದಾರೆ.
 
ಅಲ್ಲದೆ, ಮಹಿಳೆಯರ ಸುರಕ್ಷತೆಗಾಗಿ ಪೋಲೀಸ್ ಇಲಾಖೆಯಲ್ಲಿ 33 ರಷ್ಟು ಮಹಿಳಾ ಉದ್ಯೋಗಿಗಳನ್ನು ನೇಮಿಸಬೇಕು ಎಂದು ಗಾಂಧಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನದಲ್ಲಿ ಪ್ರಿಯಕರ, ಬೆಂಗಳೂರಿನಲ್ಲಿ ಪ್ರೇಯಸಿ ಆತ್ಮಹತ್ಯೆ