Select Your Language

Notifications

webdunia
webdunia
webdunia
webdunia

ಧ್ಯಾನ ಮುಗಿಸಿದ ತಕ್ಷಣ ದೆಹಲಿಗೆ ಬಂದು ಮೋದಿ ಮಾಡಿದ ಕೆಲಸವೇನು

Modi

Krishnaveni K

ನವದೆಹಲಿ , ಸೋಮವಾರ, 3 ಜೂನ್ 2024 (09:11 IST)
ನವದೆಹಲಿ: ಎರಡು ದಿನಗಳ ಕಾಲ ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆಯ ಮುಂದೆ ಧ್ಯಾನ ಮಾಡಿದ್ದ ಪ್ರಧಾನಿ ಮೋದಿ ದೆಹಲಿಗೆ ಹೋದ ತಕ್ಷಣ ಮಾಡಿದ ಕೆಲಸವೇನು ನೋಡಿ.

ಮೊನ್ನೆ ಸಂಜೆಯಷ್ಟೇ ಮೋದಿ ಧ್ಯಾನ ಮುಗಿಸಿ ದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಎಕ್ಸಿಟ್ ಪೋಲ್ ಫಲಿತಾಂಶಗಳೂ ಬಂದಿವೆ. ಈ ಫಲಿತಾಂಶಗಳೆಲ್ಲವೂ ಮತ್ತೆ ಮೋದಿ ಅಧಿಕಾರಕ್ಕೆ ಬರಲಿದ್ದಾರೆ ಎಂದೇ ಹಳುತ್ತಿದೆ.

ಹೀಗಾಗಿ ದೆಹಲಿಗೆ ಹೋದ ತಕ್ಷಣ ಮೋದಿ ಮ್ಯಾರಥಾನ್ ಸಭೆ ನಡೆಸಿದ್ದಾರೆ. ರೆಮಲ್ ಚಂಡಮಾರತ, ದೆಹಲಿಯ ಬಿಸಿಲ ತಾಪ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಪರಿಹಾರದ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದಾರೆ.

ಇದರ ಜೊತೆಗೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಂದಿನ 100 ದಿನಗಳ ಕಾಲ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ರೂಪು ರೇಷೆ ಸಿದ್ಧಪಡಿಸಿದ್ದಾರೆ. ಫಲಿತಾಂಶ ಬರುವ ಮುನ್ನವೇ ಮೋದಿ ತಮ್ಮ ಗೆಲುವು ನಿಶ್ಚಿತ ಎಂದು ಆತ್ಮವಿಶ್ವಾಸದಲ್ಲಿದ್ದು, ಹೊಸ ಸರ್ಕಾರ ರಚನೆ ಬಗ್ಗೆಯೂ ಈಗಾಗಲೇ ಯೋಜನೆ ಸಿದ್ಧಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಡಿಯೋ ಕೇಸ್ ನಲ್ಲಿ ಸಿಲುಕಿಕೊಂಡಿರುವ ಪ್ರಜ್ವಲ್ ರೇವಣ್ಣ ಗೆದ್ದರೆ ಏನಾಗಬಹುದು