Select Your Language

Notifications

webdunia
webdunia
webdunia
webdunia

420 ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಸೇಲ್ ಆದ ಪಿಂಕ್ ಸ್ಟಾರ್ ಡೈಮಂಡ್

420 ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಸೇಲ್ ಆದ ಪಿಂಕ್ ಸ್ಟಾರ್ ಡೈಮಂಡ್
ಹಾಂಗ್ ಕಾಂಗ್ , ಬುಧವಾರ, 5 ಏಪ್ರಿಲ್ 2017 (11:03 IST)
ಪಿಂಕ್ ಸ್ಟಾರ್ ಎಂದೇ ಕರೆಯಲಾಗುತ್ತಿದ್ದ 59.6 ಕ್ಯಾರೆಟ್`ನ ಡೈಮಂಡ್ ಹಾಂಗ್ ಕಾಂಗ್`ನ ಸೊದೆಬಿ ಹರಾಜಿನಲ್ಲಿ ಬರೋಬ್ಬರಿ 71.2 ಮಿಲಿಯನ್ ಡಾಲರ್`ಗೆ ಸೇಲ್ ಆಗಿದ್ದು, ಹೊಸ ದಾಖಲೆ ಬರೆದಿದೆ.
 

ಹರಾಜಿಗೂ ಮುನ್ನ 60 ಮಿಲಿಯನ್ ಡಾಲರ್`ಗೆ ಸೇಲ್ ಆಗುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆಗೂ ಮೀರಿ ಡೈಮಂಡ್ ಸೇಲ್ ಆಗಿದೆ. ಜಿನಿವಾದಲ್ಲಿಯೇ ಈ ಹಿಂದೆ ಹರಾಜಿನಲ್ಲಿ ಈ ಡೈಮಂಡ್ ಸೇಲ್ ಆಗಿತ್ತು. ಆದರೆ, ಖರೀದಿಸಿದ ವ್ಯಕ್ತಿ ಹಣ ಪಾವತಿಗೆ ವಿಫಲನಾದ ಹಿನ್ನೆಲೆಯಲ್ಲಿ ಮತ್ತೆ ಸೇಲ್`ಗೆ ಬಂದಿತ್ತು.

ವಿಶ್ವದ ಅತಿ ದೊಡ್ಡ ದೋಷರಹಿತ ಗುಲಾಬಿ ಬಣ್ಣದ ವಜ್ರ ಇದಾಗಿದೆ ಎಂದು ಅಮೆರಿಕದ ಜಿಮೋಲಾಜಿಕಲ್ ಇನ್ಸ್`ಟಿಟ್ಯೂಟ್ ಪ್ರಮಾಣಪತ್ರ ನೀಡಿದೆ.

ಮೂವರು ಟೆಲಿಫೋನ್ ಬಿಡ್ಡರ್`ಗಳು 5 ನಿಮಿಷ ಪೈಪೋಟಿಯಲ್ಲಿ ತೊಡಗಿದ್ದರು. ಹಾಂಗ್ ಕಾಂಗ್ ಜುವೆಲ್ಲರ್ ಚೌ ತೈ ಫೂಕ್ ಈ ವಜ್ರವನ್ನ ಹೆಚ್ಚಿನ ಬೆಲೆಗೆ ಖರೀದಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಎಎಸ್ಐ ಮೇಲೆ ಮಾರಣಾಂತಿಕ ಹಲ್ಲೆ