Daily Horoscope

Select Your Language

Notifications

webdunia
webdunia
webdunia
webdunia

ಮಂಗಳೂರಿನಲ್ಲಿ ಎಎಸ್ಐ ಮೇಲೆ ಮಾರಣಾಂತಿಕ ಹಲ್ಲೆ

asi
ಮಂಗಳೂರಿನಲ್ಲಿ ಕಳೆದ ರಾತ್ರಿ ಎಎಸ್ಐ ಒಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ರಾತ್ರಿ ಪಾಳಿಯಲ್ಲಿದ್ದ ಎಎಸ್ಐ ಐತಪ್ಪ ಮೇಲೆ ಬೈಕ್`ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಲೇಡಿ ಹಿಲ್ ಬಳಿ ಅಪಾಚೆ ಬೈಕ್`ನಲ್ಲಿ ಬಂದ ದುಷ್ಕರ್ಮಿಗಳು ರಾಡ್`ನಿಂದ ಎಎಸ್ಐ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡಿರುವ ಎಎಸ್ಐ ಐತಪ್ಪ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಅನುಮತಿ ಪಡೆಯದೇ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದ ಸಂದರ್ಭ ಎಎಸ್ಐ ಲಾಠಿಚಾರ್ಜ್ ಮಾಡಿದ್ದರು. ಈ ಸಂದರ್ಭ ಪೊಲೀಸರನ್ನ ಬಿಡುವುದಿಲ್ಲ ಎಂದು ಪಿಎಫ್ಐ ಕಾರ್ಯಕರ್ತರು ಕೂಗಿದ್ದರು. ಹೀಗಾಗಿ, ಘಟನೆಯಲ್ಲಿ ಸಂಘಟನೆ ಕಾರ್ಯಕರ್ತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕೀಲರಿಗೆ ಕೊಡಲು ನನ್ನ ಕಿಸೆಯಿಂದ ಹಣ ಖರ್ಚು ಮಾಡಬೇಕೇ? : ಸಿಎಂ ಕೇಜ್ರಿವಾಲ್