Publish Date: Wed, 05 Apr 2017 (10:07 IST)
Updated Date: Wed, 05 Apr 2017 (10:09 IST)
ನವದೆಹಲಿ: ಅರುಣ್ ಜೇಟ್ಲಿ ವಿರುದ್ಧ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ವಕೀಲರ ಬಿಲ್ ಪಾವತಿಸಲು ನನ್ನ ಸ್ವಂತ ಹಣ ಯಾಕೆ ಖರ್ಚು ಮಾಡಬೇಕು ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಅರುಣ್ ಜೇಟ್ಲಿ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಭಾರೀ ಅಕ್ರಮದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ನಾನು ತನಿಖೆ ಮಾಡಲು ಮುಂದಾಗಿದ್ದಕ್ಕೆ ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಲಾಗಿತ್ತು. ಡಿಡಿಸಿಎ ಹಗರಣದ ತನಿಖೆ ವಿಚಾರವಾಗಿ ನ್ಯಾಯಾಲಯದ ಕಲಾಪಗಳಿಗೆ ನಾನೇಕೆ ಹಣ ಖರ್ಚು ಮಾಡಬೇಕು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ವಕೀಲ ರಾಮ್ ಜೇಠ್ಮಲಾನಿಗೆ 3.42 ಕೋಟಿ ರೂ. ಮೊತ್ತದ ಬಿಲ್ ಪಾವತಿಸಲು ಕೇಜ್ರಿವಾಲ್ ಸರ್ಕಾರದ ಹಣ ದುರ್ಬಳಕೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಈ ವಿಚಾರ ಈಗ ಬಿಜೆಪಿ ಮತ್ತು ಎಎಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ