ಒಡಿಶಾ : ಅತ್ಯಂತ ಭಯಂಕರವಾದ ಫೊನಿ ಚಂಡಮಾರುತ ಇದೀಗ ಒಡಿಶಾದ ಕಡಲ ತೀರಕ್ಕೆ ಅಪ್ಪಳಿಸಿದ್ದು, ಸುಮಾರು 9 ರಿಂದ 10 ಕಿಲೋ ಮೀಟರ್ ವರೆಗೆ ಅಲೆಗಳು ಎಳುತ್ತಿವೆ.
ಚಂಡಮಾರುತವು ಒಡಿಶಾ ಕರಾವಳಿಯ ಗೋಪಾಲಪುರ ಮತ್ತು ಚಾಂದಬಾಲಿ ನಡುವೆ ಅಪ್ಪಳಿಸಿದ್ದು, ಭಾರಿ ಗಾಳಿ ಹಾಗೂ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕಡಲತೀರದ10 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಶಾಲಾ - ಕಾಲೇಜುಗಳಿಗೆ ಶನಿವಾರದವರೆಗೂ ರಜೆ ಘೋಷಿಸಲಾಗಿದೆ.
ಪ್ರಚಂಡವಾಗಿ ಬೀಸುತ್ತಿರುವ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮರಗಳು ಉರುಳಿ ಬೀಳುತ್ತಿವೆ. ರೈಲು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 180 ರಿಂದ 200 ಕಿಮೀ ವೇಗದಲ್ಲಿ ಫೊನಿ ಚಂಡಮಾರುತ ತನ್ನ ರೌದ್ರ ನರ್ತನವನ್ನು ತೋರಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.