Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಟ್ಯಾಂಕರ್ ಪಲ್ಟಿ: ರಸ್ತೆ ಮೇಲೆ ಹರಿದ 20,000 ಲೀಟರ್ ಪೆಟ್ರೋಲ್

ಪೆಟ್ರೋಲ್ ಟ್ಯಾಂಕರ್ ಪಲ್ಟಿ: ರಸ್ತೆ ಮೇಲೆ ಹರಿದ 20,000 ಲೀಟರ್ ಪೆಟ್ರೋಲ್
ನವದೆಹಲಿ , ಮಂಗಳವಾರ, 20 ಜೂನ್ 2017 (10:43 IST)
ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಪೆಟ್ರೋಲ್ ರಸ್ತೆಯಲ್ಲಿ ನೀರಿನಂತೆ ಹರಿದಿರುವ ಘಟನೆ ನವದೆಹಲಿ ಮೂಲ್ ಚಂದ್ ಅಂಡರ್ ಪಾಸ್ ಬಳಿ ನಡೆದಿದೆ.

ಬೆಳಗಿನ ಜಾವ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪ್ರದೇಶವನ್ನ ಸುತ್ತುವರೆದಿದ್ದು, ಯಾವುದೇ ಹೆಚ್ಚಿನ ಅನಾಹುತ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ. 20,000 ಲೀಟರ್`ನಷ್ಟು ಪೆಟ್ರೋಲ್ ಹರಿದು ಚರಂಡಿ ಸೇರಿದೆ. ಸುತ್ತಲೂ ರಸ್ತೆ ಸಂಚಾರವನ್ನ ಸ್ಥಗಿತಗೊಳಿಸಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಎಲ್ಲೆಡೆ ಬಂದೋಬಸ್ತ್ ಮಾಡಿದ್ಧಾರೆ. ಕ್ರೇನ್ ಸಹಾಯದಿಂದ ಟ್ಯಾಂಕರ್ ಅನ್ನ ಎತ್ತಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

‘ವಿತಂಡ ವಾದ ಮಾಡಬೇಡಿ ಸಾಲ ಮನ್ನಾ ಮಾಡಿ’