Publish Date: Tue, 20 Jun 2017 (10:40 IST)
Updated Date: Tue, 20 Jun 2017 (10:42 IST)
ಬೆಂಗಳೂರು: ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡುವ ಬಗ್ಗೆ ಆಸಕ್ತಿ ತೋರದ ರಾಜ್ಯ ಸರ್ಕಾರದ ಮೇಲೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೆಂಡ ಕಾರಿದ್ದಾರೆ.
ಕೇಂದ್ರ ಮಾಡಿದರೆ ನಾವೂ ಮಾಡ್ತೀವಿ ಎನ್ನುತ್ತಿರುವ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಡಿ ಕಾರಿರುವ ಶೆಟ್ಟರ್ ನಿಮ್ಮದೇ ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್ ಸರ್ಕಾರವೂ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದೆ.
ಹಾಗಿರುವಾಗ ನೀವೇಕೆ ಕೇಂದ್ರವನ್ನು ದೂಷಿಸುತ್ತಾ ಜನರ ದಾರಿ ತಪ್ಪಿಸುತ್ತಿದ್ದೀರಿ. ವಿತಂಡ ವಾದ ಮಾಡದೆ ಸಾಲ ಮನ್ನಾ ಮಾಡಿ ಎಂದು ಶೆಟ್ಟರ್ ಒತ್ತಾಯಿಸಿದ್ದಾರೆ. ಈಗಾಗಲೇ ಸಾಲ ಮನ್ನಾ ವಿಚಾರವಾಗಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿರುವ ಬಿಜೆಪಿಗೆ ಪಂಜಾಬ್ ನ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವುದು ಪ್ರಬಲ ಅಸ್ತ್ರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ