ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ಸಮಯ ಬಾಕಿಯಿರುವಾಗ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಮುಂದಾಗಿದೆ.
ಪೆಟ್ರೋಲ್-ಡೀಸೆಲ್ ದರ ಏರಿಕೆ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಇದೇ ವಿಚಾರವನ್ನೂ ವಿಪಕ್ಷಗಳು ಚುನಾವಣೆ ವೇಳೆ ಅಸ್ತ್ರವಾಗಿ ಬಳಸುವ ಸಾಧ‍್ಯತೆಯಿದೆ. ಹೀಗಾಗಿ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಲು ಮುಂದಾಗಿದೆ.
ಸದ್ಯದಲ್ಲಿಯೇ ಪೆಟ್ರೋಲ್-ಡೀಸೆಲ್ ದರ 8 ರಿಂದ 10 ರೂ. ಅಗ್ಗವಾಗುವ ಸಾಧ‍್ಯತೆಯಿದೆ. ಹೊಸ ವರ್ಷದ ಸಂದರ್ಭದಲ್ಲಿಯೇ ಜನತೆಗೆ ಮೋದಿ ಸರ್ಕಾರ ಬಂಪರ್ ಕೊಡುಗೆ ನೀಡಲು ನಿರ್ಧರಿಸಿದೆ.
ಈಗಾಗಲೇ ಈ ಸಂಬಂಧ ಇಂಧನ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಧಾನಿ ಮೋದಿ ಅನುಮೋದನೆಯೊಂದೇ ಬಾಕಿ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಬೆನ್ನಲ್ಲೇ ಕೇಂದ್ರದ ಈ ನಿರ್ಧಾರಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ.