ಮುಂಬೈ : ವ್ಯಕ್ತಿಯೊಬ್ಬ ಎಟಿಎಂನಿಂದ 500 ರೂ. ಹಣ ಡ್ರಾ ಮಾಡಲು ಹೋದಾಗ 5 ಪಟ್ಟು ಹೆಚ್ಚಿನ ಕ್ಯಾಶ್ ಬಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಹೌದು, ನಾಗ್ಪುರದ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್ನ ಎಟಿಎಂನಲ್ಲಿ ವ್ಯಕ್ತಿಯೊಬ್ಬರು 500 ರೂ. ಡ್ರಾ ಮಾಡಲು ಹೋದಾಗ 2,500 ರೂ. ಹಣ ಬಂದಿದೆ.
500 ರೂ.ಯ 1 ನೋಟು ಬರಬೇಕಿದ್ದಲ್ಲಿ 500 ರೂ.ಯ ಒಟ್ಟು 5 ನೋಟುಗಳು ಸಿಕ್ಕಿವೆ. ಅವರು ಇದೇ ಪ್ರಕ್ರಿಯೆಯನ್ನು ಮತ್ತೆ ಪುನರಾವರ್ತಿಸಿದಾಗಲೂ ಮತ್ತೆ 5 ರೂ.ಯ 5 ನೋಟುಗಳು ಬಂದಿದೆ.
ಈ ಆಶ್ಚರ್ಯಕರ ವಿಚಾರ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಹೆಚ್ಚಿನ ದುಡ್ಡನ್ನು ಪಡೆಯಲು ಜನರು ಎಟಿಎಂ ಮುಂದೆ ಮುಗಿ ಬಿದ್ದಿದ್ದಾರೆ. ತಕ್ಷಣವೇ ಬ್ಯಾಂಕ್ ಗ್ರಾಹಕರಲ್ಲಿ ಒಬ್ಬರು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಟಿಎಂ ಅನ್ನು ಮುಚ್ಚಿದ್ದಾರೆ.