Select Your Language

Notifications

webdunia
webdunia
webdunia
webdunia

ಚಂದ್ರಬಾಬು ನಾಯ್ಡು ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ: ನಾನೇ ನಿರ್ಣಾಯಕ ಎಂದ ನಾಯಕ

ಚಂದ್ರಬಾಬು ನಾಯ್ಡು ವಿರುದ್ಧ ಪವನ್ ಕಲ್ಯಾಣ್ ವಾಗ್ದಾಳಿ: ನಾನೇ ನಿರ್ಣಾಯಕ ಎಂದ ನಾಯಕ
ಹೈದರಾಬಾದ್ , ಶನಿವಾರ, 1 ಡಿಸೆಂಬರ್ 2018 (09:55 IST)
ಹೈದರಾಬಾದ್: 2019 ರ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಗೆಲುವು ಸಾಧಿಸಲ್ಲ. ಅತಂತ್ರ ಸ್ಥಿತಿ ಬರಲಿದೆ ಎಂದು ಜನ ಸೇನಾ ಪಕ್ಷದ ನಾಯಕ, ಚಿತ್ರನಟ ಪವನ್ ಕಲ್ಯಾಣ್ ಹೇಳಿದ್ದಾರೆ.


‘2019 ರಲ್ಲಿ ಚಂದ್ರಬಾಬು ನಾಯ್ಡು ಸೋಲು ಖಚಿತ. ಅವರ ಜನಪ್ರಿಯತೆ ಕುಸಿಯುತ್ತಿದೆ, ಸರ್ಕಾರದ, ಶಾಸಕರ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ’ ಎಂದು ಪವನ್ ವಾಗ್ದಾಳಿ ನಡೆಸಿದ್ದಾರೆ.

‘ಜನ ಹೊಸತನ್ನು ಬಯಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಂಧ್ರ ಹೊಸ ರಾಜಕೀಯಕ್ಕೆ ಸಾಕ್ಷಿಯಾಗಲಿದೆ’ ಎಂದಿರುವ ಪವನ್ ತಾವು ವೈಎಸ್ ಆರ್ ಕಾಂಗ್ರೆಸ್ ನ ಜಗನ್ ರೆಡ್ಡಿಯೊಂದಿಗೆ ಸೇರಿಕೊಂಡು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆ ಮೂಲಕ ಅತಂತ್ರ ಸ್ಥಿತಿ ಬಂದರೆ ತಮ್ಮ ಪಕ್ಷ ನಿರ್ಣಾಯಕವಾಗಲಿದೆ ಎಂದು ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಗೆ ತೆಲಂಗಾಣ ಕಾಂಗ್ರೆಸ್ ನ ನಾಯಕತ್ವ