Webdunia - Bharat's app for daily news and videos

Install App

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

Sampriya
ಮಂಗಳವಾರ, 22 ಏಪ್ರಿಲ್ 2025 (16:54 IST)
Photo Courtesy X
ನವದೆಹಲಿ: ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಇತ್ತೀಚಿನ ತಮ್ಮ ಹೇಳಿಕೆಗಳ ವಿವಾದದ ನಡುವೆಯೇ ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಇಂದು ನ್ಯಾಯಾಂಗದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ಮುಂದುವರಿಸಿದ್ದಾರೆ.  

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ರಾಷ್ಟ್ರಪತಿಗಳು, ರಾಜ್ಯಪಾಲರಿಗೆ ಸರ್ಕಾರ ನೀಡುವ ಮಸೂದೆಗಳ ಅನುಮೋದನೆಗೆ ಅಥವಾ ಆ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್ ಗಡುವು ನೀಡಿತ್ತು.
ರಾಷ್ಟ್ರಪತಿಗಳು ತಮ್ಮ ಅನುಮೋದನೆಗಾಗಿ ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಕುರಿತು ನಿರ್ಧರಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮೂರು ತಿಂಗಳ ಕಾಲಾವಕಾಶವನ್ನು ನಿಗದಿಪಡಿಸಿತ್ತು. ಇದಾದ ನಂತರ ಜಗದೀಪ್ ಸುಪ್ರೀಂ ಕೋರ್ಟ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂ ಕೋರ್ಟ್ ಹೊಂದಿಲ್ಲ ಎಂದು ಅವರು ಹೇಳಿದ್ದರು.


ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಸಾಂವಿಧಾನಿಕ ಕಾರ್ಯಕಾರಿಣಿ ಉಚ್ಚರಿಸುವ ಪ್ರತಿಯೊಂದು ಪದವೂ ರಾಷ್ಟ್ರದ ಅತ್ಯುನ್ನತ ಹಿತಾಸಕ್ತಿಯಿಂದ ಪ್ರೇರಿತವಾಗಿದೆ ಎಂದು ಪುನರುಚ್ಚರಿಸಿದ್ದಾರೆ.

ಜನರಿಗಾಗಿ ಮತ್ತು ಸಾಂವಿಧಾನಿಕ ಪದ್ಧತಿಗಳ ಮೂಲಕ ಆಯ್ಕೆಯಾದವರು ಅದನ್ನು ರಕ್ಷಿಸುವ ಮತ್ತು ಅದರ ವಿಷಯ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ ಸುಪ್ರೀಂ ಮಾಸ್ಟರ್ಸ್ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಂವಿಧಾನವು ಅದರ ಸಾರ, ಅದರ ಮೌಲ್ಯ, ಅದರ ಅಮೃತವನ್ನು ಸಂವಿಧಾನದ ಪೀಠಿಕೆಯಲ್ಲಿ ಒಳಗೊಂಡಿದೆ. ನಾವು ಭಾರತದ ಜನರಲ್ಲೇ ಸರ್ವೋಚ್ಚ ಶಕ್ತಿಯಿದೆ. ಯಾರೂ ಭಾರತದ ಜನರಿಗಿಂತ ಮೇಲಲ್ಲ. ಭಾರತದ ಜನರು ಸಂವಿಧಾನದ ಅಡಿಯಲ್ಲಿ ತಮ್ಮ ಅಭಿವ್ಯಕ್ತಿಗಳು, ಅವರ ಆಸೆ, ಅವರ ಇಚ್ಛೆಯನ್ನು ತಮ್ಮ ಸಾರ್ವಜನಿಕ ಪ್ರತಿನಿಧಿಗಳ ಮೂಲಕ ಪ್ರತಿಬಿಂಬಿಸಲು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರು ಚುನಾವಣೆಯ ಸಮಯದಲ್ಲಿ ಈ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ ಎಂದು ಹೇಳಿದ್ದರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋರ್ಟ್‌ ವಾತಾವರಣ ಹಾಳು ಮಾಡಿದ ವಕೀಲನಿಗೆ ₹5 ಲಕ್ಷ ದಂಡ ವಿಧಿಸಿ ಬುದ್ಧಿ ಕಲಿಸಿದ ಸುಪ್ರೀಂ ಕೋರ್ಟ್‌

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 1009 ಮಂದಿ ನೇಮಕಾತಿ, ಟಾಪರ್‌ ಶಕ್ತಿ ದುಬೆ ಓದಿದ್ದೇನು ಗೊತ್ತಾ

ಶರಬತ್‌ ಜಿಹಾದ್‌ ಹೇಳಿಕೆಗೆ ಸ್ವೀಕಾರರ್ಹವಲ್ಲ: ಬಾಬಾ ರಾಮ್‌ದೇವ್‌ ವಿರುದ್ಧ ಡೆಲ್ಲಿ ಹೈಕೋರ್ಟ್‌ ಗರಂ

Wing commander assault: ಭಾಷೆ ವಿಚಾರಕ್ಕೆ ಇನ್ನೊಬ್ಬರ ಮೇಲೆ ಹಲ್ಲೆ ನಡೆಸುವ ಸಣ್ಣ ಬುದ್ಧಿ ಕನ್ನಡಿಗರದ್ದಲ್ಲ: ಸಿದ್ದರಾಮಯ್ಯ ಗುಡುಗು

ವಿದೇಶಗಳಲ್ಲಿ ರಾಷ್ಟ್ರ ಗೌರವಕ್ಕೆ ಧಕ್ಕೆ ತಂದ ರಾಹುಲ್ ಗಾಂಧಿ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments