Select Your Language

Notifications

webdunia
webdunia
webdunia
webdunia

ಪಾಕ್ ತಕ್ಕ ಬೆಲೆ ತೆರಬೇಕು: ಅರುಣ್ ಜೇಟ್ಲಿ

Pakistan
ನವದೆಹಲಿ , ಗುರುವಾರ, 3 ನವೆಂಬರ್ 2016 (11:23 IST)
ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಉಪಟಳ ನೀಡುತ್ತಿರುವುದಕ್ಕೆ ಕಿಡಿಕಾರಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಇದಕ್ಕೆಲ್ಲ ಪಾಕಿಸ್ತಾನ ತಕ್ಕ ಬೆಲೆ ತೆರಬೇಕು ಎಂದು ಗುಡುಗಿದ್ದಾರೆ.
 
ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ರಫ್ತನ್ನು ಮೌನವಾಗಿ ಸಹಿಸಿದ್ದಾಯ್ತು. ಉರಿ ಹಾಗೂ ಪಠಾಣ್‌ಕೋಟ್‌ನಲ್ಲಿ ಉಗ್ರರು ನಡೆಸಿದ ಪೈಶಾಚಿಕ ದಾಳಿಯಲ್ಲಿ ಬಹಳಷ್ಟನ್ನು ಕಳೆದುಕೊಂಡಿದ್ದೇವೆ. ರಾಜತಾಂತ್ರಿಕ ಉಪಕ್ರಮಗಳು ಸಹ ಯಾವ ಪ್ರಯೋಜನಕ್ಕೂ ಬಂದಿಲ್ಲ. ಪಾಕಿಸ್ತಾನ ಮಾತ್ರ ತನ್ನ ಉದ್ಧಟನವನ್ನು ಮುಂದುವರೆಸಿದ್ದು ಇದಕ್ಕೆ ತಕ್ಕ ಪ್ರತಿಫಲ ಅದಕ್ಕೆ ಸಿಗಲಿದೆ ಎಂದಿದ್ದಾರೆ ಜೇಟ್ಲಿ.
 
ಭಾರತ ಹೆಚ್ಚು ಪೂರ್ವಭಾವಿ ವಿಧಾನ ಅನುಸರಿಸಬೇಕಿದೆ ಎಂದ ಜೇಟ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕ ಪಾಕ್ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದೆ. ಉಗ್ರರ ಉಪಟಳ ಮೀತಿಮೀರಿದೆ. ನಮ್ಮ ನಾಗರಿಕರು ಮತ್ತು ಸೈನಿಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಪಾಕ್ ಇದಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

17 ಆಮ್ ಆದ್ಮಿ ಶಾಸಕರಿಗೆ ನೋಟಿಸ್