Select Your Language

Notifications

webdunia
webdunia
webdunia
webdunia

17 ಆಮ್ ಆದ್ಮಿ ಶಾಸಕರಿಗೆ ನೋಟಿಸ್

Office-of profit
ನವದೆಹಲಿ , ಗುರುವಾರ, 3 ನವೆಂಬರ್ 2016 (11:10 IST)
ಲಾಭದಾಯಕ ಹುದ್ದೆ ಹೊಂದಿರುವ ಆರೋಪ ಎದುರಿಸುತ್ತಿರುವ ಆದ್ಮಿ ಪಕ್ಷದ 27 ಶಾಸಕರಿಗೆ ಚುನಾವಣಾ ಆಯೋಗ ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಕೇಜ್ರಿವಾಲ್ ಮತ್ತು ಅವರ ಸರ್ಕಾರ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ.
 
ಲಾಭದಾಯಕ ಹುದ್ದೆ ಹೊಂದಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಿದ ಆಯೋಗ ನೋಟಿಸ್ ಜಾರಿಗೊಳಿಸಿದ್ದು, ನವೆಂಬರ್ 11 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. 
 
ಈ 27 ಶಾಸಕರು ಸಂಸದೀಯ ಕಾರ್ಯದರ್ಶಿಗಳಾಗಿದ್ದು, ಇದು ಲಾಭದಾಯಕ ಹುದ್ದೆಯಡಿ ಬರುತ್ತದೆ. ಇವರನ್ನು ಅನರ್ಹಗೊಳಿಸುವಂತೆ  ರಾಷ್ಟ್ರಪತಿಗಳಿಗೆ ಶಿಪಾರಸು ಮಾಡಬೇಕೆಂದು ಕಾಂಗ್ರೆಸ್ ನಾಯಕರೊಬ್ಬರು ಕಳೆದ ಜೂನ್ ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಹಚ್ಚಿದ್ದು ಸಾಕು ಎಂದಿದ್ದಕ್ಕೆ ಆತ್ಮಹತ್ಯೆ