ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿರುವ ಭಯೋತ್ಪಾದಕ ಸಂಸ್ಥೆಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲಿ ತನ್ನ ಕುಟುಂಬ ಛಿದ್ರ ಛಿದ್ರವಾಗಿದೆ ಎಂದು ಪಾಕ್ ಭಯೋತ್ಪಾದಕ ಗುಂಪಿನ ಕಮಾಂಡರ್ ಮಸೂದ್ ಅಜರ್ ಹೇಳಿಕೊಂಡಿದ್ದಾನೆ.
ಜೈಶ್-ಎ-ಮೊಹಮದ್ (ಜೆಇಎಂ) ಕಮಾಂಡರ್ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಪ್ಪಿಕೊಂಡಿದ್ದಾರೆ.
ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಅಡಗುತಾಣಕ್ಕೆ ಹೇಗೆ ಪ್ರವೇಶಿಸಿ ದಾಳಿ ಮಾಡಿತು ಎಂಬುದನ್ನು ವಿವರಿಸಿದ್ದಾನೆ.
"ಭಯೋತ್ಪಾದನೆಯನ್ನು ಅಪ್ಪಿಕೊಂಡು, ನಾವು ಈ ದೇಶದ ಗಡಿಗಳನ್ನು ರಕ್ಷಿಸಲು ದೆಹಲಿ, ಕಾಬೂಲ್ ಮತ್ತು ಕಂದಹಾರ್‌ನಲ್ಲಿ ಹೋರಾಡಿದ್ದೇವೆ. ಎಲ್ಲವನ್ನೂ ತ್ಯಾಗ ಮಾಡಿದ ನಂತರ ಮೇ 7 ರಂದು ಮೌಲಾನಾ ಮಸೂದ್ ಅಜರ್ ಕುಟುಂಬವನ್ನು ಬಹವಾಲ್‌ಪುರದಲ್ಲಿ ಭಾರತೀಯ ಪಡೆಗಳು ಛಿದ್ರಗೊಳಿಸಿದವು" ಎಂದು ಕಾಶ್ಮೀರಿ ಉರ್ದುವಿನಲ್ಲಿ ಭಾವನಾತ್ಮಕ ಭಾಷಣದಲ್ಲಿ ಹೇಳುವುದು ಕೇಳಿಸುತ್ತದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ವಾರಗಳ ನಂತರ ಭಾರತವು ಆಪರೇಷನ್ ಸಿಂಧೂರ್ ಅನ್ನು ನಡೆಸಿತು.
ಭಾರತೀಯ ಭದ್ರತಾ ಪಡೆಗಳು, ಪಾಕಿಸ್ತಾನ ಮತ್ತು ಪಿಒಕೆ ಒಳಗಿನ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ರಾತ್ರಿ ದಾಳಿ ನಡೆಸಿತು.
ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಯ ಆಳವಾದ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿವೆ.
ಪಾಕಿಸ್ತಾನದ 12 ನೇ ಅತಿದೊಡ್ಡ ನಗರವಾದ ಬಹವಾಲ್‌ಪುರವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಏಕೆಂದರೆ ಇದು ಜೆಎಂನ ನರ ಕೇಂದ್ರವಾಗಿದೆ.
ಲಾಹೋರ್‌ನಿಂದ ಸುಮಾರು 400 ಕಿಮೀ ದೂರದಲ್ಲಿದೆ, ಇದು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯಲ್ಪಡುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾದಲ್ಲಿ ಜೆಎಂನ ಕಾರ್ಯಾಚರಣಾ ಕೇಂದ್ರವನ್ನು ಹೊಂದಿದೆ.