ಪಾಕಿಸ್ತಾನ : ಪಾಕಿಸ್ತಾನದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದೇಶದ ಪ್ರಮುಖ ನಗರ ಕರಾಚಿ ಸಂಪೂರ್ಣ ಜಲಾವೃತಗೊಂಡಿದೆ. ಇಡೀ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ವಾಹನಗಳು ಹಾಗೂ ಅಂಗಡಿಮುಂಗಟ್ಟುಗಳು ಸಹ ನೀರಿನಿಂದ ತುಂಬಿದೆ. ಇದುವರೆಗೂ ಸುರಕ್ಷಿತಾ ಪಡೆಗಳು 1800 ಕ್ಕೂ ಹೆಚ್ಚು ಮಂದಿಯನ್ನು ಸ್ಥಳದಿಂದ ಸುರಕ್ಷಿತ ತಾಣಕ್ಕೆ ರವಾನಿಸಿದೆ.
ಎಲ್ಲಾ ಹೆದ್ದಾರಿಗಳೂ ಸೇರಿದಂತೆ ಪ್ರಮುಖ ರಸ್ತೆಗಳು ನೀರಿನಿಂದ ತುಂಬಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಎಲ್ಲಾ ರಸ್ತೆಗಳೂ ಸಹ ಜಲಾವೃತಗೊಂಡಿರುವುದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಒಂದೇ ದಿನ ರಾತ್ರಿಯಲ್ಲಿ 75 ಮಿಮಿ ಮಳೆ ಸುರಿದಿರುವುದರಿಂದ ಮೂಲಭೂತ ಸೌಲಭ್ಯಗಳಿಗಾಗಿ ಜನರು ಪರದಾಡುವಂತಾಗಿದೆ.