ಪಾಕಿಸ್ತಾನದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆಸಿದ್ದು ಪೊಲೀಸ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿ ಕನಿಷ್ಠ 60 ಜನರನ್ನು ಬಲಿ ಪಡೆದಿದ್ದಾರೆ. ಕ್ವೆಟ್ಟಾ ನಗರದಲ್ಲಿ ಸೋಮವಾರ ರಾತ್ರಿ 110.30ರ ಸುಮಾರಿಗೆ ಈ ಅಮಾನುಷ ಕೃತ್ಯ ನಡೆದಿದೆ.
ಮೃತಪಟ್ಟವರಲ್ಲಿ ಬಹುತೇಕ ಮಂದಿ ಪೊಲೀಸ್ ಪೇದೆಗಳಾಗಿದ್ದು, ಘಟನೆಯಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.
ಮತ್ತೆ ಹಲವು ಪೇದೆಗಳು ಉಗ್ರರ ಸೆರೆಯಾಳುಗಳಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.
ಸುಮಾರು 6 ಜನರಿದ್ದ ಭಯೋತ್ಪಾದಕ ತಂಡ ಏಕಾಏಕಿ ತರಬೇತಿ ಶಾಲೆಯನ್ನು ನುಗ್ಗಿ ಗುಂಡಿನ ಸುರಿಮಳೆಗೈದಿದೆ. ಉಗ್ರರನ್ನು ಹತ್ತಿಕ್ಕಲು ಸೇನಾ ಕಾರ್ಯಾಚರಣೆ ಆರಂಭವಾಗಿದ್ದು ಇಲ್ಲಿಯವರೆಗೆ ಮೂವರು ಉಗ್ರರು ನೆಲಕ್ಕುರುಳಿದ್ದಾರೆ.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ತನ್ನ ನೀಚ ಬುದ್ಧಿಯನ್ನು ಬಿಡಲಿಲ್ಲವೆಂದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕ್, ಜೈಷೆ ಮೊಹಮ್ಮದ ಸಮಘಟನೆಯ ಮುಖ್ಯಸ್ಥ ಮಸೂದ್ ಅಜರ್, ಅಲ್-ಖೈದಾ ನಾಯಕ ಮತೀರ್ ರೆಹಮಾನ್ ಸೇರಿದಂತೆ ಒಟ್ಟು 5,100 ಶಂಕಿತ ಉಗ್ರರ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ