Select Your Language

Notifications

webdunia
webdunia
webdunia
Saturday, 8 March 2025
webdunia

ಈಕೆ ಜಗತ್ತಿನ ನಂ. ೧ ದಢೂತಿ ಮಹಿಳೆ

ಈಕೆ ಜಗತ್ತಿನ ನಂ. ೧ ದಢೂತಿ ಮಹಿಳೆ
ಕೈರೋ , ಮಂಗಳವಾರ, 25 ಅಕ್ಟೋಬರ್ 2016 (12:00 IST)
ಕೈರೋ: ಈಜಿಪ್ಟ್ ದೇಶದ ೩೬ ವರ್ಷದ ಮಹಿಳೆ ಇಮಾನ್ ಅಹಮದ್ ಅಬ್ದುಲತಿ ಜಗತ್ತಿನ ಅತಿಹೆಚ್ಚು ಸ್ಥೂಲಕಾಯದ ಮಹಿಳೆ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.

ಅವರ ದೇಹದ ತೂಕ ೫೦೦ ಕೆಜಿಗೆ ತಲುಪಿದ್ದು, ಇದಕ್ಕಿಂತ ಹೆಚ್ಚು ತೂಕದ ಇನ್ನೊಂದು ಮಹಿಳೆ ಇಲ್ಲ ಎನ್ನಲಾಗಿದೆ. ಉತ್ತರ ಈಜಿಪ್ಟ್ ನ ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿರುವ ಇವರು, ಸ್ಥೂಲಕಾಯದ ಸಮಸ್ಯೆಯಿಂದಾಗಿ ೨೫ ವರ್ಷಗಳಿಂದ ಮನೆಯಿಂದ ಹೊರಗೆ ಬಂದಿಲ್ಲ. ಸ್ಥೂಲ ದೇಹ ಇಳಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದಾಗ, ಆಕೆಯ ಸಹೋದರಿ ಸಾರ್ವಜನಿಕರಲ್ಲಿ ಸಹಾಯ ಹಸ್ತ ಚಾಚಿದ್ದರು. ಸದ್ಯ ತಾಯಿ ಹಾಗೂ ಸಹೋದರಿ ಆರೈಕೆಯಲ್ಲಿ ಇಮಾನ್ ಇದ್ದಾರೆ.
 
ಹುಟ್ಟಿದಾಗಲೇ ಇಮಾನ್ ಅವರು ಐದು ಕೆಜಿ ಇದ್ದಿದ್ದು, ಹನ್ನೊಂದನೇ ವಯಸ್ಸಿನಲ್ಲಿ ಪಾಶ್ವ್ ವಾಯು ಪೀಡಿತರಾದರು. ಈಗ ಅವರಿಗೆ ಆನೆಕಾಲು ರೋಗವಿದೆ ಎಂದು ವೈದ್ಯರು ತಿಳಿಸಿದ್ದು, ಕೈ ಕಾಲುಗಳಲ್ಲಿ ಭಾರಿ ಊತ ಕಾಣಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಗಮ ಮಂಡಳಿಯಲ್ಲಿ ಶಾಸಕರಿಗೆ ಸ್ಥಾನ: ಅತೃಪ್ತ ಶಾಸಕರನ್ನು ಸಮಾಧಾನಿಸಿದ ಸಿಎಂ