ನವದೆಹಲಿ: ಇಸ್ಮಾಮಾಬಾದ್‌ನ ಲಾಲ್ ಮಸೀದಿಯ ಧಾರ್ಮಿಕ ಗುರು ಅಬ್ದುಲ್ ಅಜೀಜ್ ಘಾಜಿ ಅವರು ಪಾಕಿಸ್ತಾನದ ಸರ್ಕಾರದ ವಿರುದ್ಧ ಕಿಡಿಕಾರಿ, ಭಾರತದೊಂದಿಗಿನ ಸಂಘರ್ಷವು ಇಸ್ಲಾಮಿಕ್ ಯುದ್ಧವಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ, ಪಾಕ್ ಧರ್ಮಗುರು ತನ್ನದೇ ಸರ್ಕಾರವನ್ನು ಟೀಕಿಸುತ್ತಿರುವುದನ್ನು ಕಾಣಬಹುದು.
ಲಾಲ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಸಭೆಯೊಂದರಲ್ಲಿ ಮಾತನಾಡಿದ ಅಜೀಜ್ ಘಾಜಿ, "ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಪ್ರಾರಂಭವಾದರೆ, ನಿಮ್ಮಲ್ಲಿ ಎಷ್ಟು ಮಂದಿ ಪಾಕಿಸ್ತಾನವನ್ನು ಬೆಂಬಲಿಸುತ್ತೀರಿ? ನಿಮ್ಮ ಕೈಗಳನ್ನು ಎತ್ತಿರಿ" ಎಂದು ಕೇಳಿದರು. ಮೌನವಾಗಿದ್ದು, ಜನಸಮೂಹ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ, ಅವರು ಮುಂದುವರಿಸಿದರು, "ಕೆಲವೇ ಕೈಗಳು ಗೋಚರಿಸುತ್ತವೆ. ಅಂದರೆ ಉತ್ತಮ ಮಟ್ಟದ ಅರಿವು ಬೆಳೆದಿದೆ. ವಿಷಯವೆಂದರೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವು ಇಸ್ಲಾಮಿಕ್ ಯುದ್ಧವಲ್ಲ ಎಂದು ಸರ್ಕಾರವನ್ನು ಟೀಕಿಸಿದರು.
ಪಾಕಿಸ್ತಾನ ಸರ್ಕಾರವನ್ನು ಕಟುವಾಗಿ ಟೀಕಿಸಿ, ಇದು ದಬ್ಬಾಳಿಕೆಯ ಸರ್ಕಾರ ಎಂದು ಕರೆದರು. ಇಂದು, ಪಾಕಿಸ್ತಾನದ ವ್ಯವಸ್ಥೆಯು ಅಪನಂಬಿಕೆಯ ವ್ಯವಸ್ಥೆಯಾಗಿದೆ (ಕುಫ್ರ್), ದಬ್ಬಾಳಿಕೆಯ ವ್ಯವಸ್ಥೆ, ಭಾರತಕ್ಕಿಂತ ಕೆಟ್ಟದಾಗಿದೆ. ಪಾಕಿಸ್ತಾನದಲ್ಲಿರುವಷ್ಟು ದಬ್ಬಾಳಿಕೆ ಭಾರತದಲ್ಲಿ ಇಲ್ಲ. ಭಾರತದಲ್ಲಿ ಲಾಲ್ ಮಸೀದಿಯಂತಹ ಭಯಾನಕ ಘಟನೆ ನಡೆದಿದೆಯೇ ಎಂದು ಪ್ರಶ್ನೆ ಮಾಡಿದರು.