ಬೆಂಗಳೂರು: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬಳಿಕ ಪಾಕ್ ಹಾಗೂ ಭಾರತ ನಡುವೆ ಉದ್ವಿಗ್ನತೆ ಜಾಸ್ತಿಯಾಗುತ್ತಲೇ ಇದೆ.
ಇದೀಗ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮಂಗಳವಾರ (ಮೇ 6, 2025) ನಾಗರಿಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುವ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ. ಇದರಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಮೇಲೆ ಅಣಕು ಡ್ರಿಲ್‌ಗಳನ್ನು ನಡೆಸುವುದು, “ಪ್ರತಿಕೂಲ ದಾಳಿ” ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ ತರಬೇತಿ ನೀಡಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಮಾಲೋಚನೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ಮಾತುಕತೆಗೆ ಕರೆ ನೀಡಿದರು.
ಸಭೆಯ ನಂತರ 15 ಸದಸ್ಯರ UNSC ಯಾವುದೇ ಹೇಳಿಕೆಯನ್ನು ನೀಡಲಿಲ್ಲ ಆದರೆ ಪಾಕಿಸ್ತಾನವು ತನ್ನದೇ ಆದ ಉದ್ದೇಶಗಳನ್ನು "ಹೆಚ್ಚಾಗಿ ಪೂರೈಸಿದೆ" ಎಂದು ಹೇಳಿಕೊಂಡಿದೆ.
ಅಲ್ಲದೆ, ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಅವರು ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಅಪರಾಧಿಗಳನ್ನು ನ್ಯಾಯಾಂಗಕ್ಕೆ ತರಬೇಕು ಎಂದು ಅವರು ಹೇಳಿದರು.