Select Your Language

Notifications

webdunia
webdunia
webdunia
webdunia

Operation Sindoor: ಆಪರೇಷನ್ ಸಿಂದೂರ್ ಗೆ ಬಲಿಯಾಯ್ತು ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ನ ಕುಟುಂಬ

Masood Azar

Krishnaveni K

ಜಮ್ಮು ಕಾಶ್ಮೀರ , ಬುಧವಾರ, 7 ಮೇ 2025 (11:27 IST)
Photo Credit: X
ಜಮ್ಮು ಕಾಶ್ಮೀರ: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಗೆ ಪಾಕಿಸ್ತಾನದ ಪ್ರಮುಖ ಉಗ್ರ ಮಸೂದ್ ಅಜರ್ ಮಸೂದ್ ಕುಟುಂಬದ 14 ಸದಸ್ಯರು ನಾಮಾವಶೇಷ ಮಾಡಲಾಗಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ನೆಲೆಗಳನ್ನು ಗುರಿಯಾಗಿರಿಸಿ ಭಾರತೀಯ ಸೇನೆ ನಿನ್ನೆ ತಡರಾತ್ರಿ ದಾಳಿ ಮಾಡಿತ್ತು. ಇದರಲ್ಲಿ 21 ಉಗ್ರರ ನೆಲೆಗಳನ್ನು ಸರ್ವನಾಶ ಮಾಡಲಾಗಿದೆ ಎಂದು ಭಾರತೀಯ ಸೇನೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

ಇದರ ಬೆನ್ನಲ್ಲೇ ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಉಗ್ರ ಮಸೂದ್ ಅಜರ್ ನ ಕುಟುಂಬದ 14 ಸದಸ್ಯರೂ ಸರ್ವನಾಶವಾಗಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ವಶದಲ್ಲಿದ್ದ ಮಸೂದ್ ಅಜರ್ ನನ್ನು ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಭಾರತ ನಾಗರಿಕರ ಪ್ರಾಣ ಉಳಿಸಲು ಬಿಡುಗಡೆ ಮಾಡಲಾಗಿತ್ತು.

ಬಳಿಕ ಆತ ಭಾರತ ವಿರುದ್ಧ ಉಗ್ರ ಚಟುವಟಿಕೆಗಳನ್ನು ಮಾಡುತ್ತಲೇ ಬಂದಿದ್ದಾನೆ. ಈತನ ಕುಟುಂಬವನ್ನೇ ಈಗ ಭಾರತೀಯ ಸೇನೆ ಸರ್ವನಾಶ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಯುದ್ಧದ ಕಾರ್ಮೋಡದ ನಡುವೆ ಚಿನ್ನದ ದರ ಏರಿಕೆಯ ಶಾಕ್