Select Your Language

Notifications

webdunia
webdunia
webdunia
webdunia

Operation Sindoor: ಆಪರೇಷನ್ ಸಿಂದೂರ ಬಗ್ಗೆ ಮಹಿಳಾ ಅಧಿಕಾರಿಗಳನ್ನೇ ಕೂರಿಸಿ ಮಾಹಿತಿ ನೀಡಿದ ಸೇನೆ

Operation Sindoor

Krishnaveni K

ಜಮ್ಮು ಕಾಶ್ಮೀರ , ಬುಧವಾರ, 7 ಮೇ 2025 (11:08 IST)
Photo Credit: X
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ ಉಗ್ರರ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿತು. ಇದೀಗ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲೂ ಮಹಿಳಾ ಅಧಿಕಾರಿಗಳೇ ಬಂದಿದ್ದು ವಿಶೇಷ.

ಇಂದು ಭಾರತೀಯ ಸೇನೆ ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿ ದಾಳಿಯ ಮಾಹಿತಿ ನೀಡಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಜೊತೆಗೆ ಭಾರತೀಯ ಭೂ ಸೇನೆ ಮತ್ತು ನೌಕಾ ಸೇನೆಯ ಪರವಾಗಿ ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಂಬ ಮಹಿಳಾ ಅಧಿಕಾರಿಗಳು ವಿವರಣೆ ನೀಡಲು ಬಂದಿದ್ದು ವಿಶೇಷವಾಗಿತ್ತು.

ಈ ಮೂಲಕ ಮಹಿಳೆಯರನ್ನು ಟಾರ್ಗೆಟ್ ಮಾಡಲು ಬಂದಿದ್ದಕ್ಕೆ ಮಹಿಳೆಯರ ಮೂಲಕವೇ ಖಡಕ್ ಸಂದೇಶ ರವಾನಿಸಲಾಗಿದೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು ದಾಳಿಯ ಸಂಪೂರ್ಣ ಚಿತ್ರಣ ನೀಡಿದ್ದಾರೆ.

ಒಟ್ಟು 9 ಟಾರ್ಗೆಟ್, 21 ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಲಾಗಿದೆ. 6 ರಿಂದ 100 ಕಿ.ಮೀ.ವರೆಗೆ ಗಡಿ ರೇಖೆಯಿಂದಾಚೆ ಹೋಗಿ ದಾಳಿ ಮಾಡಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ. ಇದರಲ್ಲಿ ಯಾವುದೇ ನಾಗಕರಿಕರು ಮತ್ತು ಪಾಕಿಸ್ತಾನ ಸೇನೆಗೆ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Operation Sindoor: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಹತ್ವದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಅಂಶಗಳೇನು