Select Your Language

Notifications

webdunia
webdunia
webdunia
webdunia

ವಾಪಸಾದ ಆಪರೇಷನ್ ರೋಮಿಯೊ: 121 ಜನರ ಬಂಧನ

ವಾಪಸಾದ ಆಪರೇಷನ್ ರೋಮಿಯೊ: 121 ಜನರ ಬಂಧನ
ಗುರುಗ್ರಾಂ(ಹರ್ಯಾಣ): , ಭಾನುವಾರ, 4 ಸೆಪ್ಟಂಬರ್ 2016 (19:21 IST)
ಗುರುಗ್ರಾಂ ಪೊಲೀಸರು ಶನಿವಾರ ರಾತ್ರಿ ನಗರದಲ್ಲಿ ಚುಡಾಯಿಸುವ ಘಟನೆಗಳಿಗೆ ಕಡಿವಾಣ ಹಾಕಲು ಎಂಜಿ ರಸ್ತೆಯಲ್ಲಿ  121 ಜನ ರೋಡ್ ರೋಮಿಯೊಗಳನ್ನು ಬಂಧಿಸಿ ಆಪರೇಷನ್ ರೋಮಿಯೊ ರಿಟರ್ನ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 
ನಗರದಲ್ಲಿ ಇತ್ತೀಚೆಗೆ ಹುಡುಗಿಯರನ್ನು ಚುಡಾಯಿಸುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2 ಗಂಟೆಗಳ ಆಪರೇಷನ್ ರೋಮಿಯೊ ಕಾರ್ಯಕ್ರಮ ನಡೆಸಲಾಯಿತು ಎಂದು ಎಸಿಪಿ ಧರಣ ಯಾದವ್ ತಿಳಿಸಿದರು.
 
ಯುವತಿಯರಿಗೆ ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಅಭದ್ರತೆಯ ಭಾವನೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹಿಂದೆ ಕೂಡ ಪೊಲೀಸರು ಇಂತಹ ಅನೇಕ ಕಾರ್ಯಾಚರಣೆಗಳನ್ನು ನಡೆಸಿ ಚುಡಾಯಿಸುವ ಪ್ರಕ್ರಿಯೆಗಳನ್ನು ಮೊಟಕು ಮಾಡಿತ್ತು.  ಕಳೆದ ಆಗಸ್ಟ್ 27ರಂದು ಪೊಲೀಸರು ಇದೇ ಸ್ಥಳದಲ್ಲಿ 50 ಜನರನ್ನು ಬಂಧಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದರ್ ತೆರೇಸಾ ಸಂತ ಪದವಿಗೆ ದಾರಿ ಕಲ್ಪಿಸಿದ 2 ಪವಾಡಗಳು