Select Your Language

Notifications

webdunia
webdunia
webdunia
webdunia

ಮದರ್ ತೆರೇಸಾ ಸಂತ ಪದವಿಗೆ ದಾರಿ ಕಲ್ಪಿಸಿದ 2 ಪವಾಡಗಳು

ಮದರ್ ತೆರೇಸಾ ಸಂತ ಪದವಿಗೆ ದಾರಿ ಕಲ್ಪಿಸಿದ 2 ಪವಾಡಗಳು
ವ್ಯಾಟಿಕನ್ , ಭಾನುವಾರ, 4 ಸೆಪ್ಟಂಬರ್ 2016 (17:52 IST)
ಮದರ್ ತೆರೇಸಾ ನಿಧನದ ಬಳಿಕ ಅವರಿಗೆ ಸಂಬಂಧಿಸಿದ ಎರಡು ಪವಾಡಗಳಿಗೆ ರೋಮನ್ ಕ್ಯಾಥೋಲಿಕ್ ಚರ್ಚ್ ಮನ್ನಣೆ ನೀಡಿದ ಬಳಿಕ ಮದರ್ ತೆರೇಸಾ ಅವರಿಗೆ ಸಂತ ಪದವಿ ನೀಡುವ ಪ್ರಕ್ರಿಯೆ ಆರಂಭವಾಗಿತ್ತು.  ಬಂಗಾಳದ ದಕ್ಷಿಣ ದಿನಜ್‌ಪುರ ಜಿಲ್ಲೆಯ ಬುಡಕಟ್ಟು ಮಹಿಳೆ ಮೋನಿಕಾ ಬೆಸ್ರಾ ಪವಾಡಸದೃಶ ರೀತಿಯಲ್ಲಿ ಗುಣವಾಗಿದ್ದು ಮೊದಲ ಪ್ರಕರಣವಾಗಿದೆ.

ಕ್ಯಾನ್ಸರ್ ಹುಣ್ಣಿನಿಂದ ಬಳಲುತ್ತಿದ್ದ ಮಹಿಳೆ ಸಾವಿನ ಅಂಚಿನಲ್ಲಿದ್ದರು. ಬೆಸ್ರಾ ಅವರು 1998ರಲ್ಲಿ ತೆರೇಸಾ ಅವರ ಮೊದಲ ವಾರ್ಷಿಕ ಪುಣ್ಯತಿಥಿಯಂದು ಮಿಷನರಿ ಆಫ್ ಚಾರಿಟಿಯ ಕೆಲವು ಕ್ರೈಸ್ತ ಸನ್ಯಾಸಿನಿಯರ ಪ್ರಾರ್ಥನೆಗಳ ಸಂದರ್ಭದಲ್ಲಿ ಪವಾಡಸದೃಶ ರೀತಿಯಲ್ಲಿ ಗುಣವಾಗಿದ್ದರು.
 
ತನ್ನ ಮುಂಚಿನ ಸಂದರ್ಶನಗಳಲ್ಲಿ ತಾನು ತುಂಬಾ ರೋಗಗ್ರಸ್ಥೆಯಾಗಿದ್ದು, ನಡೆಯಲೂ ಆಗುತ್ತಿಲ್ಲ ಎಂದು ಮದರ್ ತೆರೇಸಾ ಭಾವಚಿತ್ರದೊಂದಿಗೆ ಕಂಡುಬಂದ ಬೆಸ್ರಾ ಹೇಳಿದ್ದರು. ಆಗಲೇ ಅವರಿಗೆ ಒಂದು ದಿವ್ಯ ಬೆಳಕು ಕಾಣಿಸಿತಂತೆ. ಆಗ ಕ್ರೈಸ್ತ ಸನ್ಯಾಸಿನಿಯರು ಬೆಸ್ರಾ ಹೊಟ್ಟೆಯ ಮೇಲೆ ಧಾರ್ಮಿಕ ಪದಕವನ್ನು ಒತ್ತಿದರು. ಬೆಸ್ರಾಗೆ ಕೆಲವು ಗಂಟೆಗಳ ಬಳಿಕ ಎಚ್ಚರವಾದಾಗ ಅವರು ಗುಣಮುಖಳಾಗಿದ್ದರು.

ಬೆಸ್ರಾ ಗುಣಮುಖರಾಗಿದ್ದನ್ನು ಗುರುತಿಸಿದ ವ್ಯಾಟಿಕನ್ ತೆರೇಸಾ ಅವರಿಗೆ ಪರಮಪದ ನೀಡಿ ಗೌರವಿಸಿತ್ತು. ಬ್ರೆಜಿಲ್‌ನಲ್ಲಿ ಎರಡನೇ ಪವಾಡ ಸಂಭವಿಸಿದ್ದು, ತೆರೇಸಾ ಅವರ ಮುಂಚಿನ ಪ್ರಾರ್ಥನೆಗಳ ಫಲವಾಗಿ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದರು.
 
B ಕಳೆದ ಡಿಸೆಂಬರ್‌ನಲ್ಲಿ ಪೋಪ್ ಫ್ರಾನ್ಸಿಸ್ ಆಂಡ್ರಿನೊ ಗುಣಮುಖರಾಗುವ ಮೂಲಕ ಎರಡನೇ ಪವಾಡ ಸಂಭವಿಸಿದ್ದು, ವ್ಯಾಟಿಕನ್ ವೈದ್ಯರು ಇದನ್ನು ವೈದ್ಯಕೀಯ ಕಾರಣ ನೀಡಲು ಸಾಧ್ಯವಾಗುವುದಿಲ್ಲ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

49 ಹಸುಗಳಿಗೆ ಬ್ಯಾಕ್ಟೀರಿಯಾ ಸೋಂಕು: ದಯಾಮರಣಕ್ಕೆ ಸೂಚನೆ