ಕೋಲಾರ ಸಚಿವ ವರ್ತೂರು ಪ್ರಕಾಶ್ ಅವರ ಫಾರಂನಲ್ಲಿದ್ದ 998 ಹಸುಗಳ ಪೈಕಿ 49 ಹಸುಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಬ್ಲೂಸೆರ್ ಲೋಸೆಸ್ಕ್ ಎಂಬ ಬ್ಯಾಕ್ಟೀರಿಯಾ ಸೋಂಕಿನ ಕಾಯಿಲೆಗೆ ಹಸುಗಳು ತುತ್ತಾಗಿದ್ದು, ದಯಾಮರಣ ನೀಡಲು ನಿರ್ಧರಿಸಲಾಗಿದೆ.
ಬ್ಯಾಕ್ಟೀರಿಯಾ ಹಸುವಿನಿಂದ ಮಾನವರಿಗೂ ಹರಡುವುದೆಂದೂ, ಉಳಿದ ದನಗಳಿಗೂ ರೋಗ ತಗಲುವ ಅಪಾಯವನ್ನು ಮನಗಂಡು ದಯಾಮರಣ ನೀಡಲು ಪಶುಸಂಗೋಪನಾ ಮಂತ್ರಿ ಎ.ಮಂಜು ಸೂಚಿಸಿದ್ದಾರೆ.
ಕಾಯಿಲೆಯಿಂದ ಬಳಲುವ ಹಸುಗಳನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ ಮತ್ತು ಅವು ಬಂಜೆತನದಿಂದ ಬಳಲುತ್ತವೆ. ಉಳಿದ ಹಸುಗಳಿಗೂ ಇದು ಹರಡುವ ಸಾಧ್ಯತೆಯಿರುವುದರಿಂದ ದಯಾಮರಣ ನೀಡಲು ಸೂಚಿಸಿದ್ದಾರೆ. ಈ ರೋಗವನ್ನು ಸ್ಥಳೀಯವಾಗಿ ಕಂದುರೋಗ ಎನ್ನಲಾಗುತ್ತದೆ. ಆದರೆ ಏನೂ ಅರಿವಿಲ್ಲದ ಮುಗ್ಧ ಹಸುಗಳನ್ನು ಕ್ರೂರವಾಗಿ ಹತ್ಯೆ ಮಾಡುವುದು ಯಾವ ನ್ಯಾಯ ಎಂಬ ಪ್ರಶ್ನೆ ಎದುರಾಗಿದೆ.
ಈ ನಡುವೆ ರೋಗಪೀಡಿತ ಹಸುಗಳ ರಕ್ತದ ಮಾದರಿಯನ್ನು ಸಂಗ್ರಹಿಸಲು ಉಪನಿರ್ದೇಶಕ ಚೆನ್ನಕೇಶವ ನೇತೃತ್ವದ ತಂಡ ಭೇಟಿ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ