Select Your Language

Notifications

webdunia
webdunia
webdunia
webdunia

ಸಂತ ಪದವಿಗೇರಿದ ಮಹಾತಾಯಿ ಮದರ್ ತೆರೇಸಾ

ಸಂತ ಪದವಿಗೇರಿದ ಮಹಾತಾಯಿ ಮದರ್ ತೆರೇಸಾ
ವ್ಯಾಟಿಕನ್ , ಭಾನುವಾರ, 4 ಸೆಪ್ಟಂಬರ್ 2016 (15:11 IST)
ತಮ್ಮ ಜೀವಿತಾವಧಿಯನ್ನು  ಜನರ ಸೇವೆಗೆ ಮುಡುಪಾಗಿಟ್ಟ ಮದರ್ ತೆರೇಸಾ ಅವರಿಗೆ ವ್ಯಾಟಿಕನ್ ಸಿಟಿಯಲ್ಲಿ ಸಂತ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ಇನ್ನಿತರೆ ವಿಶೇಷ ಕಾರ್ಯಕ್ರಮಗಳು ನಡೆಯಿತು. ಪೋಪ್ ಫ್ರಾನ್ಸಿಸ್ ಅವರು ಮದರ್ ತೆರೇಸಾ ಅವರನ್ನು ಹೊಸ ಸಂತರೆಂದು ಘೋಷಿಸಿದರು.

ತಮ್ಮ 87 ವರ್ಷಗಳ ಜೀವಿತಾವಧಿಯಲ್ಲಿ ಅರ್ಧಕ್ಕೂ ಹೆಚ್ಚು ಸಮಯವನ್ನು ಕೊಲ್ಕತಾದ ಬೀದಿ, ಬೀದಿಗಳಲ್ಲಿ ದೀನರ, ನಿರ್ಗತಿಕರ ಸೇವೆ ಮಾಡಿದ ತೆರೇಸಾ ದೀನರ ತಾಯಿ ಎಂದೇ ಹೆಸರಾಗಿದ್ದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ 12 ಮಂದಿಯ ನಿಯೋಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಮಂದಿ ತೆರೆಸಾಗೆ ಸಂತ ಪದವಿ ನೀಡಿದ ಘಟನೆಗೆ ಸಾಕ್ಷಿಯಾದರು.

ಮದರ್ ತೆರೇಸಾ ಅವರ ಮರಣಾನಂತರ ಎರಡು ಪವಾಡಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸಂತ ಪದವಿಯನ್ನು ನೀಡಲಾಯಿತು. ಮೆಸೊಡೋನಿಯಾದಲ್ಲಿ ಹುಟ್ಟಿದ ತೆರೇಸಾ ಭಾರತದ ಕೊಲ್ಕತಾದಲ್ಲಿ ತಮ್ಮ ಜೀವನವನ್ನು ಸವೆಸುತ್ತಾರೆ. ಮಿಷನರೀಸ್ ಆಫ್ ಚಾರಿಟೀಸ್ ಎಂಬ ಸಂಸ್ಥೆಯನ್ನು ಕಟ್ಟಿ ದೇಶ ವಿದೇಶಗಳಲ್ಲಿ ಅದರ ಶಾಖೆಗಳನ್ನು ಸ್ಥಾಪಿಸಿದ್ದರು.

ತೆರೇಸಾ ಕುಷ್ಠ ರೋಗಿಗಳಿಗೆ ಸೇವೆಯನ್ನು ಮಾಡುವ ಮೂಲಕ ತಾಯಿ ಎನಿಸಿಕೊಂಡಿದ್ದರು. ಅವರ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರ ಭಾರತ ರತ್ನ ಪುರಸ್ಕಾರ ನೀಡಿ ಸನ್ಮಾನಿಸಿದೆ.  ಮದರ್ ತೆರೇಸಾ ಅವರ ದೀನ, ದಲಿತರ ಸೇವೆಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕಾರವನ್ನು ಕೂಡ ಪಡೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

 


Share this Story:

Follow Webdunia kannada

ಮುಂದಿನ ಸುದ್ದಿ

ಎಂ.ಕೃಷ್ಣಪ್ಪಗೆ ವಸತಿ ಖಾತೆ, ವಿನಯ್ ಕುಲಕರ್ಣಿ, ಎ.ಮಂಜುಗೆ ಕ್ಯಾಬಿನೆಟ್ ದರ್ಜೆ ನಿರೀಕ್ಷೆ