Select Your Language

Notifications

webdunia
webdunia
webdunia
webdunia

ಎಂ.ಕೃಷ್ಣಪ್ಪಗೆ ವಸತಿ ಖಾತೆ, ವಿನಯ್ ಕುಲಕರ್ಣಿ, ಎ.ಮಂಜುಗೆ ಕ್ಯಾಬಿನೆಟ್ ದರ್ಜೆ ನಿರೀಕ್ಷೆ

ಎಂ.ಕೃಷ್ಣಪ್ಪಗೆ ವಸತಿ ಖಾತೆ, ವಿನಯ್ ಕುಲಕರ್ಣಿ, ಎ.ಮಂಜುಗೆ ಕ್ಯಾಬಿನೆಟ್ ದರ್ಜೆ ನಿರೀಕ್ಷೆ
ಬೆಂಗಳೂರು , ಭಾನುವಾರ, 4 ಸೆಪ್ಟಂಬರ್ 2016 (13:11 IST)
ರಾಜ್ಯ  ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ನಾಳೆ ಸಂಜೆ ನಾಲ್ಕು ಗಂಟೆಗೆ ರಾಜಭವನದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವರೆಂದು ನಿರೀಕ್ಷಿಸಲಾಗಿದೆ.

 ವಿಜಯನಗರ ಶಾಸಕರಾಗಿರುವ ಎಂ. ಕೃಷ್ಣಪ್ಪಗೆ ವಸತಿ ಸಚಿವ ಖಾತೆ ನೀಡುವ ನಿರೀಕ್ಷೆಯಿದೆ. ಅಂಬರೀಷ್ ಅವರ ಕೈಯಲ್ಲಿದ್ದ ವಸತಿ ಖಾತೆಯನ್ನು ಕೃಷ್ಣಪ್ಪಗೆ ಕೊಡುವ ಮೂಲಕ ಒಕ್ಕಲಿಗರಲಿದ್ದ ಅಸಮಾಧಾನಕ್ಕೆ ತೆರೆಬಿದ್ದಿದೆ.  ರಾಜ್ಯಸಚಿವರಾದ ವಿನಯ್ ಕುಲಕರ್ಣಿಗೆ ಕ್ಯಾಬಿನೆಟ್ ದರ್ಜೆ ನೀಡುವ ನಿರೀಕ್ಷೆಯಿದೆ. ಎ. ಮಂಜುಗೆ ಕೂಡ ಕ್ಯಾಬಿನೆಟ್ ದರ್ಜೆ ನೀಡುವ ನಿರೀಕ್ಷೆಯಿದೆ.

ಸಿಎಂ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಿದ್ದು, ಒಂದು ಸ್ಥಾನವನ್ನು ಜಾರ್ಜ್ ಅವರಿಗೆ ಖಾಲಿ ಬಿಟ್ಟಿದ್ದಾರೆ. ಸಿಐಡಿ ತನಿಖೆಯಲ್ಲಿ ಜಾರ್ಜ್ ದೋಷಮುಕ್ತರಾದ ಬಳಿಕ ಜಾರ್ಜ್ ಅವರಿಗೆ ಈ ಸ್ಥಾನವನ್ನು ನೀಡಲು ಸಿಎಂ ನಿರ್ಧರಿಸಿದ್ದಾರೆ. ಕಳೆದ ಬಾರಿ ಕೃಷ್ಣಪ್ಪ ಅವರಿಗೆ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿಹೋಗಿತ್ತು.  ಪಶುಸಂಗೋಪನೆ ರಾಜ್ಯ ದರ್ಜೆಯಲ್ಲಿರುವ ಎ.ಮಂಜುವಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಕಾಮಗಾರಿ ಪ್ರಶ್ನಿಸಿದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ