Select Your Language

Notifications

webdunia
webdunia
webdunia
webdunia

ಓಲ್ಡ್ ಮಾಂಕ್ ಸಂಸ್ಥಾಪಕ ಕಪಿಲ್ ಮೋಹನ್ ಇನ್ನಿಲ್ಲ

ಓಲ್ಡ್ ಮಾಂಕ್ ಸಂಸ್ಥಾಪಕ ಕಪಿಲ್ ಮೋಹನ್ ಇನ್ನಿಲ್ಲ

ಗುರುಮೂರ್ತಿ

ನವದೆಹಲಿ : , ಮಂಗಳವಾರ, 9 ಜನವರಿ 2018 (18:11 IST)
ದೇಶದಲ್ಲಿ ಹೆಚ್ಚಾಗಿ ಇಷ್ಟಪಡುವ ರಮ್ ಎಂದರೆ ಅದು ಓಲ್ಡ್ ಮಾಂಕ್. ಅದನ್ನು ಮಾರುಕಟ್ಟೆಗೆ ಪರಿಚಯಿಸಿದವರಾದ ನಿವೃತ್ತ ಬ್ರಿಗೇಡಿಯರ್ ಕಪಿಲ್ ಮೋಹನ್ ಹೃದಯಾಘಾತದಿಂದ ಮರಣ ಹೊಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಕಪಿಲ್‌ ಮೋಹನ್ ಅವರು ಜನವರಿ 6 ಶನಿವಾರದಂದು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.
 
ಮೋಹನ್ ಮೆಕಿನ್ ಮದ್ಯ ಉತ್ಪಾದನಾ ಸಂಸ್ಥೆಯ ಸಂಸ್ಥಾಪಕರಾಗಿದ್ದ ಅವರು ಗಾಜಿಯಾಬಾದ್‌ನ ಮೋಹನ್ ನಗರದಲ್ಲಿ ವಾಸಿಸುತ್ತಿದ್ದರು. ಜನವರಿ 6 ರಂದು ಅವರು ಮೃತಪಟ್ಟಿದ್ದು ಜನವರಿ 07 ರಂದು ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 2010 ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಮೋಹನ್ ಅವರು ಪತ್ನಿಯಾದ ಪುಷ್ಪ ಅವರನ್ನು ಅಗಲಿದ್ದಾರೆ.
 
1954ರ ಡಿಸೆಂಬರ್ 19ರಂದು ಮಾರುಕಟ್ಟೆ ಪ್ರವೇಶಿಸಿದ ಓಲ್ಡ್ ಮಾಂಕ್ ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಟವಾದ ರಮ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಅಲ್ಲದೇ ಅತಿದೊಡ್ಡ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಬ್ರಾಂಡ್ ಎನ್ನುವ ಖ್ಯಾತಿಯನ್ನು ಇದು ಹೊಂದಿತ್ತು. ಕಳೆದ ಎರಡು ವರ್ಷಗಳ ಹಿಂದೆ ಓಲ್ಡ್ ಮಾಂಕ್ ಬ್ರ್ಯಾಂಡ್ ಅನ್ನು ಮುಚ್ಚಲಾಗುತ್ತದೆ ಎನ್ನುವ ವದಂತಿಗಳು ಮಾರುಕಟ್ಟೆಯಲ್ಲಿ ಸುಳಿದಾಡಿತ್ತಾದರೂ ಅದನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಕಪಿಲ್ ಮೋಹನ್ ಮಾಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಬಂದ ನಂತರ ರಾಜ್ಯದಲ್ಲಿ ಕೋಮುಗಲಭೆ- ಎಚ್.ಎಂ.ರೇವಣ್ಣ