Select Your Language

Notifications

webdunia
webdunia
webdunia
webdunia

ಪ್ರಿಯಕರನನ್ನು ಉಳಿಸಲು ಮೂರಂತಸ್ತಿನಿಂದ ತಂದೆಯನ್ನೇ ಕೆಳಗೆ ತಳ್ಳಿದ ಪುತ್ರಿ

ಪ್ರಿಯಕರನನ್ನು ಉಳಿಸಲು ಮೂರಂತಸ್ತಿನಿಂದ ತಂದೆಯನ್ನೇ ಕೆಳಗೆ ತಳ್ಳಿದ ಪುತ್ರಿ
ಬೆಂಗಳೂರು , ಮಂಗಳವಾರ, 9 ಜನವರಿ 2018 (13:55 IST)
ಪ್ರಿಯಕರನನ್ನು ಉಳಿಸಲು ಪುತ್ರಿ ಹೆತ್ತ ತಂದೆಯನ್ನೇ ಮೂರನೇ ಅಂತಸ್ತಿನಿಂದ ಕೆಳಗೆ ತಳ್ಳಿ ಹತ್ಯೆಗೈದ ಹೇಯ ಘಟನೆ ವರದಿಯಾಗಿದೆ.
ಪುತ್ರಿ ಕೃತ್ಯದಿಂದ ಆಘಾತಗೊಂಡ ಆಕೆಯ ತಾಯಿ, ಪುತ್ರಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  
 
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಯುವತಿಯ ತಂದೆ ವಿಶ್ವನಾಥ್ ಸಾಹು ಬೆಳಿಗಿನ ಜಾವ 4 ಗಂಟೆಗೆ ಯಾವುದೋ ಶಬ್ದ ಕೇಳಿ ಬಂದಿದ್ದರಿಂದ ಎಚ್ಚರಗೊಂಡಿದ್ದಾರೆ. ಕೂಡಲೇ ಅವರು ತಮ್ಮ ಪುತ್ರಿಯ ಕೋಣೆಗೆ ಧಾವಿಸಿ ಬಾಗಿಲು ತೆರೆದಿದ್ದಾರೆ. 
 
ಪುತ್ರಿ ಪೂಜಾ ಮತ್ತು ಮತ್ತೊಬ್ಬ ಯುವಕ ನಗ್ನಾವಸ್ಥೆಯಲ್ಲಿರುವುದು ಕಂಡಾಗ ವಿಶ್ವನಾಥ್ ಕೋಪ ನೆತ್ತಿಗೇರಿದೆ. ಯುವಕ ಮತ್ತು ವಿಶ್ವನಾಥ್ ಮಧ್ಯೆ  ಜಗಳ ಆರಂಭವಾಗಿದೆ.
 
ಪುತ್ರಿ ಮತ್ತು ಆಕೆಯ ಪ್ರಿಯಕರ ಸೇರಿ ವಿಶ್ವನಾಥ್‌ರನ್ನು ಮೂರನೇ ಅಂತಸ್ತಿನಿಂದ ಕೆಳಗೆ ತಳ್ಳಿದ್ದಾರೆ. ಜೋರಾದ ಕೂಗಾಟ ಕೇಳಿ ವಿಶ್ವನಾಥ್ ಪತ್ನಿ ಮನೆಯಿಂದ ಹೊರಬಂದು ನೋಡಿದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. 
 
ವಿಶ್ವನಾಥ್‌ರನ್ನು ಚಿಕಿತ್ಸೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
 
ವಿಶ್ವನಾಥ್ ಪತ್ನಿ, ತಮ್ಮ ಪುತ್ರಿ ಪೂಜಾ ಹಾಗೂ ಆಕೆಯ ಪ್ರಿಯಕರ ಧರ್ಮೆಂದ್ರ ವಿರುದ್ಧ ಹತ್ಯೆ ಆರೋಪದ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪ್ರಿಯಕರ ಧರ್ಮೆಂದ್ರ ಎಸ್ಕೇಪ್ ಆಗಿದ್ದಾನೆ. 
 
ಆರೋಪಿ ಧರ್ಮೆಂದ್ರನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಆಹಾರದ ಆಯ್ಕೆಯನ್ನು ಪ್ರಶ್ನಿಸುವ ಯೋಗಿ ಆದಿತ್ಯನಾಥ್ ಯಾರು?: ಸಿಎಂ