Select Your Language

Notifications

webdunia
webdunia
webdunia
webdunia

ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತಿರುತ್ತದೆ : ನರೇಂದ್ರ ಮೋದಿ

ಹೊಸ ಸಂಸತ್
ಬೆಂಗಳೂರು , ಸೋಮವಾರ, 18 ಸೆಪ್ಟಂಬರ್ 2023 (10:33 IST)
ನಾವು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ ನಿಜ ಆದರೆ ಹಳೆಯ ಭವನವು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
ಇಂದಿನಿಂದ ಆರಂಭವಾದ ಸಂಸತ್ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಹಳೆ ಸಂಸತ್ ಭವನದಲ್ಲಿ ನಡೆಯಲಿರುವ ಕೊನೆಯ ಅಧಿವೇಶನ ಐತಿಹಾಸಿಕವಾಗಲಿದೆ. ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಎಂದು ಕರೆಯುತ್ತಿದ್ದೆವು, ಸ್ವಾತಂತ್ರ್ಯ ನಂತರ ಸದನ ಎಂದು ಕರೆಯಲು ಶುರು ಮಾಡಿದೆವು. ಭಾರತದ ನಿರ್ಮಾಣದ ನಿರ್ಣ ವಿದೇಶಿ ಶಾಸಕರದ್ದಾಗಿತ್ತು.

ಆದರೆ ಈ ಸಂಸತ್ ಭವನ ನಿರ್ಮಾಣದಲ್ಲಿ ಬೆವರು ಭಾರತೀಯರದ್ದಿದೆ, ಪರಿಶ್ರಮ ನಮ್ಮ ದೇಶದವರದ್ದು, ಹಣ ಕೂಡ ನಮ್ಮ ದೇಶದವರದ್ದು. ಹೀಗಾಗಿ ಈ ಹಳೆಯ ಸಂಸತ್ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಮೋದಿ ಹೇಳಿದ್ದಾರೆ . ಈ ಅಮೃತ ಕಾಲದಲ್ಲಿ ಹೊಸ ಹುಮ್ಮಸ್ಸು, ಹೊಸ ಉತ್ಸಾಹ, ಹೊಸ ಸಂಕಲ್ಪವನ್ನು ಹೊತ್ತು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ಭಾರತದ ಹೊಸ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗುತ್ತಿದೆ.

ಈ ಅಮೃತಕಾಲದಲ್ಲಿಯೇ ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಹೊಸ ರೂಪ, ಆಧುನಿಕತೆ, ವಿಜ್ಞಾನ, ತಂತ್ರಜ್ಞಾನ, ವಿಜ್ಞಾನಿಗಳ ಸಾಮರ್ಥ್ಯ, ಸಂಕಲ್ಪ ಶಕ್ತಿಯಿಂದ ಯಶಸ್ವಿಯಾಗಿದ್ದೇವೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಬಗ್ಗೆ ದೇವೇಗೌಡ್ರು, ಕುಮಾರಸ್ವಾಮಿ ಅತಿ ಶೀಘ್ರದಲ್ಲೇ ತೆರೆ ಎಳೆಯುತ್ತಾರೆ : ನಿಖಿಲ್ ಕುಮಾರಸ್ವಾಮಿ