Publish Date: Sat, 05 Feb 2022 (11:34 IST)
Updated Date: Sat, 05 Feb 2022 (12:36 IST)
ನವದೆಹಲಿ : ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಲಿಂಕ್ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶುಕ್ರವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ನಡೆದ ಪ್ರತ್ಯೇಕ ಪ್ರಶ್ನೋತ್ತರ ಅವಧಿಯಲ್ಲಿ ಕಿರಣ್ ರಿಜಿಜು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ಜೋಡಣೆ ಬಗ್ಗೆ ಇದ್ದ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಆಧಾರ್ ಬಳಸಿಕೊಂಡು ಪೌರತ್ವ ದೃಢೀಕರಿಸಲು ಸರ್ಕಾರ ಪ್ರೊಟೋಕಾಲ್ ರಚಿಸಿದೆಯೇ? ಎಂಬ ಲಿಖಿತ ಪ್ರಶ್ನೆಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಯಾವುದೇ ರೀತಿಯ ಜೋಡಣೆ ನಡೆಸಲಾಗುವುದಿಲ್ಲ.