Select Your Language

Notifications

webdunia
webdunia
webdunia
webdunia

ಹೊಸ ಪಕ್ಷ ರಚನೆ ಇಲ್ಲ; ನಾವು ಒಂದಾಗಿರುತ್ತೇವೆ: ಮುಲಾಯಂ ಸಿಂಗ್ ಯಾದವ್

ಹೊಸ ಪಕ್ಷ ರಚನೆ ಇಲ್ಲ; ನಾವು ಒಂದಾಗಿರುತ್ತೇವೆ: ಮುಲಾಯಂ ಸಿಂಗ್ ಯಾದವ್
ಲಖನೌ , ಬುಧವಾರ, 11 ಜನವರಿ 2017 (15:36 IST)
ಪುತ್ರನ ಜತೆಗಿರುವ ಶೀತಲ ಸಮರದ ಮಧ್ಯೆ ತನ್ನ ಮಗನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದ ಸಮಾಜವಾದಿ ಸ್ಥಾಪಕ ಮುಲಾಯಂ ಸಿಂಗ್ ಯಾದವ್, ಮತ್ತೀಗ ಹೊಸ ಪಕ್ಷ ರಚನೆ ಇಲ್ಲ, ನಾವು ಒಂದಾಗಿರುತ್ತೇವೆ ಎಂದಿದ್ದಾರೆ.
ಬುಧವಾರ ಲಖನೌನಲ್ಲಿರುವ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷವನ್ನು ಒಗ್ಗಟ್ಟಿನಿಂದಿಡಿ ಎಂದಿದ್ದಾರೆ. 
 
ಹಲವರ ಹೋರಾಟಗಳ ಫಲವಾಗಿ ಸಮಾಜವಾದಿ ಪಕ್ಷ ಬೆಳೆದಿದೆ. ಪಕ್ಷದ ಕಾರ್ಯಕರ್ತರು ಬಿಕ್ಕಟ್ಟುಗಳನ್ನು ಎದುರಿಸಿ ಪಕ್ಷವನ್ನು ಬೆಳೆಸಿದ್ದಾರೆ. ನಾನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋದಾಗ ಅಖಿಲೇಶ್‌ಗೆ ಕೇವಲ ಎರಡು ವರ್ಷ ಪ್ರಾಯ ಎಂದು ಮುಲಾಯಂ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಹೋದರ ಶಿವಪಾಲ್ ಸಹ ವೇದಿಕೆಯಲ್ಲಿದ್ದರು. 
 
ನಾನೇನು ಹೊಂದಿದ್ದೇನೋ ಅದೆಲ್ಲ ದೇಶಕ್ಕಾಗಿ, ನನ್ನ  ಬಳಿ ಇರವುದನ್ನೆಲ್ಲ ಕೊಟ್ಟಾಗಿದೆ? ಮತ್ತೀಗ ಉಳಿದಿರುವುದು ನೀವು( ಕಾರ್ಯಕರ್ತರು). ಜನತೆಯಿಂದ ನಾವು ನಾಯಕರಾದೆವು ಮತ್ತು ಜನರು ಮತ್ತು ಕಾರ್ಯಕರ್ತರು ಪಕ್ಷದ ಒಗ್ಗಟನ್ನು ಉಳಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
 
ಪಕ್ಷದೊಳಗಿನ ಕಲಹದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಕೂಡ ಪಕ್ಷದ ಏಕತೆಗೆ ಅಡಚಣೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ದೆಹಲಿಗೆ ಹೋಗಿದ್ದೆ. ನಮ್ಮ ಪಕ್ಷದಲ್ಲಿ ವಿಷ ತುಂಬುತ್ತಿರುವವರು ಯಾರು, ಬೇರೆ ಪಕ್ಷದ ನಾಯಕರೊಂದಿಗೆ ಸೇರಿಕೊಂಡು ತಂತ್ರ ರೂಪಿಸುತ್ತಿರುವವರು ಯಾರು ಎಂಬ ಅರಿವು ನನಗಿದೆ ಎಂದ ಅವರು ನೇರವಾಗಿ ತಮ್ಮ ಸೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ವಿರುದ್ಧ ಕಿಡಿಕಾರಿದರು.
 
ರಾಮ್ ಗೋಪಾಲ್ ಯಾದವ್ ಬೇರೆ ಪಕ್ಷವನ್ನು ಕಟ್ಟುತ್ತಿದ್ದಾರೆ.  ಕಳೆದ ಕೆಲ ದಿನಗಳಲ್ಲಿ ಮೂರು ಬಾರಿ ಬೇರೆ ಪಕ್ಷದ ಅಧ್ಯಕ್ಷರನ್ನವರು ಭೇಟಿಯಾಗಿದ್ದಾರೆ. ಅವರೀಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ನಾನು ಅಖಿಲೇಶ್‌ನಲ್ಲಿ ರಾಮಗೋಪಾಲ್ ಹಿಂದೆ ಯಾಕೆ ಬಿದ್ದಿದ್ದೀಯಾ ಎಂದು ಕೇಳಿದೆ ಎಂದಿದ್ದಾರೆ ಮುಲಾಯಂ.
 
ನಾವು ಯಾವುದೇ ಪರಿಸ್ಥಿತಿಯಲ್ಲಿ ಪಕ್ಷದ ಏಕತೆ ಕಾಯ್ದುಕೊಳ್ಳುತ್ತೇವೆ. ನಾವು ಪಕ್ಷದ ಹೆಸರನ್ನು ಬದಲಿಸುವುದಿಲ್ಲ, ಜತೆಗೆ ಚಿಹ್ನೆಯನ್ನು ಕೂಡ ಬದಲಿಸುವುದಿಲ್ಲ. ನಮ್ಮ ಸೈಕಲ್‌ನ್ನು ನಮ್ಮ ಜತೆ ಇಟ್ಟುಕೊಳ್ಳ ಬಯಸುತ್ತೇವೆ ಎಂದು ಮುಲಾಯಂ ಘೋಷಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 2017: ಉದ್ಯೋಗ, ಅಗ್ಗದ ಮನೆ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಜನತೆಯ ಸಲಹೆ