Select Your Language

Notifications

webdunia
webdunia
webdunia
webdunia

ಬಜೆಟ್ 2017: ಉದ್ಯೋಗ, ಅಗ್ಗದ ಮನೆ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಜನತೆಯ ಸಲಹೆ

ಬಜೆಟ್ 2017: ಉದ್ಯೋಗ, ಅಗ್ಗದ ಮನೆ, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಜನತೆಯ ಸಲಹೆ
ನವದೆಹಲಿ , ಬುಧವಾರ, 11 ಜನವರಿ 2017 (15:20 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1 ರಂದು ಮೂರನೇ ಬಜೆಟ್ ಮಂಡಿಸುತ್ತಿದ್ದು, ದೇಶದ ಅತಿ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಜನತೆಯ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರಕಾರ, ಸಾಮಾಜಿಕ ಅಂತರ್ಜಾಲ ತಾಣಗಳ ಮೂಲಕ ಬಜೆಟ್‌ನಲ್ಲಿ ಯಾವ ಯಾವ ಅಂಶಗಳಿಗೆ ಹೆಚ್ಚಿನ ಗಮನ ಕೊಡಬೇಕು ಎನ್ನುವ ಬಗ್ಗೆ ಸಲಹೆ ಸೂಚನೆಗಳನ್ನು ಕೊಡುವಂತೆ ಜನತೆಯನ್ನು ಕೋರಿದೆ.
 
ಕೇಂದ್ರ ಸರಕಾರ ನಾಲ್ಕು ದಿನಗಳೊಳಗಾಗಿ ಸಲಹೆ ನೀಡುವಂತೆ ಕೋರಿದ ಮನವಿಗೆ ಸ್ಪಂದಿಸಿದ ಜನತೆ ಒಂದೇ ದಿನದಲ್ಲಿ 17 ಸಾವಿರ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇದರಿಂದ ಜನತೆ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿರುವುದು ಸಾಬೀತಾಗುತ್ತದೆ. 
 
ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸಲು ಯಾವ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ವಿತ್ತ ಸಚಿವಾಲಯದ ಪ್ರಶ್ನೆಗೆ, ಶೇ.50 ರಷ್ಟು (7031 ಮತದಾರರು) ಮೈಕ್ರೋ ಸ್ಮಾಲ್ ಮತ್ತು ಮೀಡಿಯಂ ಎಂಟರ್‌ಪ್ರೈಸೆಸ್‌ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ. 
 
ಶೇ.20 ರಷ್ಟು ಜನತೆ ಅಗ್ಗದ ದರದ ಗೃಹ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದರೆ, ಶೇ.10 ರಷ್ಟು ಜನತೆ ವಾಹನೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ. ಶೇ.8 ರಷ್ಟು ಜನತೆ ಗಾರ್ಮೆಂಟ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.
 
ಮುಂಬರುವ ಬಜೆಟ್‌ನಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಕೇಂದ್ರ ಸರಕಾರದ ಪ್ರಶ್ನೆಗೆ ಶೇ.53 ರಷ್ಟು( 7399 ಮತದಾರರು) ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪನವರೇ ಯಾಕೆ ನಿಮಗೆ ಬ್ರಿಗೇಡ್ ಬೇಡ?: ಮತ್ತೆ ಯಡ್ಡಿಗೆ ಈಶ್ವರಪ್ಪ ಟಾಂಗ್