Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಅಳವಡಿಕೆ: ಚೀನಾ ಹೆದರುವ ಅಗತ್ಯವಿಲ್ಲ ಎಂದ ಭಾರತೀಯ ಸೇನೆ

ಗಡಿಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಅಳವಡಿಕೆ: ಚೀನಾ ಹೆದರುವ ಅಗತ್ಯವಿಲ್ಲ ಎಂದ ಭಾರತೀಯ ಸೇನೆ
ನವದೆಹಲಿ , ಮಂಗಳವಾರ, 23 ಆಗಸ್ಟ್ 2016 (20:24 IST)
ಅರುಣಾಚಲ ಪ್ರದೇಶದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಅಳವಡಿಕೆಗೆ ಚೀನಾ ವಿರೋಧ ವ್ಯಕ್ತಪಡಿಸಿದ ನಂತರ, ಪ್ರತಿಕ್ರಿಯೆ ನೀಡಿದ ಭಾರತೀಯ ಸೇನೆ, ನಮ್ಮ ಸುರಕ್ಷತೆಗಾಗಿ ಕ್ಷಿಪಣಿಗಳನ್ನು ಅಳವಡಿಸಲಾಗುತ್ತಿದೆಯೇ ಹೊರತು ನೆರೆ ರಾಷ್ಟ್ರಗಳಿಗೆ ಆತಂಕ ಉಂಟು ಮಾಡಲು ಅಲ್ಲ ಎಂದು ಸ್ಪಷ್ಟಪಡಿಸಿದೆ.
 
ನಮ್ಮ ದೇಶವನ್ನು ಯಾವ ರೀತಿ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎನ್ನುವುದು ನಮ್ಮ ನಿರ್ಧಾರ. ಕ್ಷಿಪಣಿಗಳನ್ನು ನೆರೆರಾಷ್ಟ್ರಗಳನ್ನು ಹೆದರಿಸಲು ಅಳವಡಿಸಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.
 
ಬ್ರಹ್ಮೋಸ್ ಕ್ಷಿಪಣಿಗಳನ್ನು ಅಳವಡಿಸುವುದರಿಂದ ಭಾರತ-ಚೀನಾ ಗಡಿಭಾಗಗಳಲ್ಲಿ ಅಸ್ಥಿರತೆ ಉಂಟು ಮಾಡುತ್ತದೆ ಎನ್ನುವ ಚೀನಾ ದೇಶದ ಎಚ್ಚರಿಕೆಯನ್ನು ಭಾರತ ತಳ್ಳಿಹಾಕಿದೆ. 
 
ಭಾರತ ಗಡಿಭಾಗಗಳಲ್ಲಿ ಸೂಪರ್ ಸೋನಿಕ್ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಳವಡಿಸುವುದರಿಂದ ಟೀನಾದ ಟಿಬೆಟ್ ಮತ್ತು ಯುನ್ನನ್ ಪ್ರಾಂತ್ಯಗಳಿಗೆ ಗಂಭೀರ ಬೆದರಿಕೆಯೊಡ್ಡಿದಂತಾಗುತ್ತದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ ಪ್ರಕಟಿಸಿದೆ. 
 
ಭಾರತ ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಚೀನಾ ಗಡಿಯಲ್ಲಿ ಅಳವಡಿಸುವುದರಿಂದ ಚೀನಾದ ಗಡಿಭಾಗದಲ್ಲಿರುವ ಪ್ರದೇಶಗಳ ಜನರಲ್ಲಿ ತೀವ್ರ ತೆರೆನಾದ ಆತಂಕ ಸೃಷ್ಟಿಸಿದೆ ಎಂದು ಚೀನಾ ಸೇನಾ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಹಿತವನ್ನು ನಾವೇ ಕಾಯ್ದುಕೊಳ್ಳಬೇಕು: ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿ