Webdunia - Bharat's app for daily news and videos

Install App

ನಾಲ್ಕು ವರ್ಷದ ಬಳಿಕ ಸಿಕ್ತು ಸೆರೆವಾಸದಿಂದ ಮುಕ್ತಿ

Webdunia
ಮಂಗಳವಾರ, 17 ಅಕ್ಟೋಬರ್ 2017 (07:47 IST)
ನವದೆಹಲಿ: ಜೋಡಿ ಕೊಲೆ ಆರೋಪ ಹೊತ್ತು ನಾಲ್ಕು ವರ್ಷದಿಂದ ಜೈಲು ಪಾಲಾಗಿದ್ದ ಆರುಷಿ ಪೋಷಕರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

14 ವರ್ಷದ ಮಗಳು ಆರುಷಿ ತಲ್ವಾರ್ ಹಾಗೂ ಮನೆಕೆಲಸದ ಹೇಮರಾಜ್ ಕೊಲೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಕಳೆದ ವಾರ ಆರುಷಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ರನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ನ ದಾಸ್ನಾ ಜೈಲಿನಿಂದ ನಿನ್ನೆ(ಅ.16) ಬಿಡುಗಡೆಯಾಗಿದ್ದಾರೆ.

ನಾಲ್ಕು ವರ್ಷದ ಬಳಿಕ ಜೈಲುವಾಸದಿಂದ ಹೊರಬಂದ ತಲ್ವಾರ್ ದಂಪತಿಯನ್ನು ರಾಜೇಶ್ ಸಹೋದರ ದಿನೇಶ್ ತಲ್ವಾರ್, ವಕೀಲರಾದ ಮನೋಜ್ ಸಿಸೋಡಿಯಾ ಹಾಗೂ ತನ್ವೀರ್ ಅಹ್ಮದ್ ಮೀರ್ ಸಂತಸದಿಂದ ಬರಮಾಡಿಕೊಂಡರು. ಇದೇವೇಳೆ ಜೈಲಿನಿಂದ ತಮ್ಮ ಕಕ್ಷಿದಾರರು ಬಿಡುಗಡೆ ಆಗುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ತನ್ವೀರ್ ಹೇಳಿದ್ದಾರೆ.

ಇನ್ನು ದಂಪತಿ ವೃತ್ತಿಯಲ್ಲಿ ದಂತ ವೈದ್ಯರು. ಜೈಲಿನಲ್ಲಿರುವಷ್ಟು ದಿನ ಅಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಡುಗಡೆಯಾದ ಬಳಿಕವೂ ತಲ್ವಾರ್ ದಂಪತಿ, 15 ದಿನಕ್ಕೊಮ್ಮೆ ಜೈಲಿಗೆ ತೆರಳಿ ಅಲ್ಲಿ ಚಿಕಿತ್ಸೆ ನೀಡುವುದಾಗಿ ದಂಪತಿ ಖುದ್ದು ಹೇಳಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments