Select Your Language

Notifications

webdunia
webdunia
webdunia
webdunia

ಪಿಒಕೆಯಲ್ಲಿ ಸೀಮಿತ ದಾಳಿ ನಡೆದಿಲ್ಲ, ಮಣ್ಣಿನಗಟ್ಟಿಯೂ ಇಲ್ಲ: ಪಾಕ್ ರಾಯಭಾರಿ

ಪಿಒಕೆಯಲ್ಲಿ ಸೀಮಿತ ದಾಳಿ ನಡೆದಿಲ್ಲ, ಮಣ್ಣಿನಗಟ್ಟಿಯೂ ಇಲ್ಲ: ಪಾಕ್ ರಾಯಭಾರಿ
ನವದೆಹಲಿ , ಗುರುವಾರ, 13 ಅಕ್ಟೋಬರ್ 2016 (19:17 IST)
ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿ ಸೆಪ್ಟೆಂಬರ್ 29 ರಂದು ಭಾರತೀಯ ಸೇನೆಯ ಸೀಮಿತ ದಾಳಿ ನಡೆಸಿರುವುದನ್ನು ಮತ್ತೊಮ್ಮೆ ತಳ್ಳಿಹಾಕಿದ ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್, ಇದೊಂದು ಗಡಿಯಂಚಿನ ಚಕಮಕಿಯಷ್ಟೆ ಎಂದು ಲೇವಡಿ ಮಾಡಿದ್ದಾರೆ. 
 
ಪಾಕಿಸ್ತಾನದ ಗಡಿಯೊಳಗೆ ಸೀಮಿತ ದಾಳಿ ನಡೆದಿಲ್ಲ. ಒಂದು ವೇಳೆ, ಸೀಮಿತ ದಾಳಿ ನಡೆದಿದ್ದರೆ ಪಾಕಿಸ್ತಾನ ಸೇನೆ ತಕ್ಕ ಉತ್ತರ ನೀಡುತ್ತಿತ್ತು. ಭಾರತೀಯ ಸೇನೆ ಗಡಿಯಂಚಿನಲ್ಲಿ ಅಲ್ಪಮಟ್ಟಿನ ಗುಂಡಿನ ಚಕಮಕಿ ಮಾತ್ರ ನಡೆಸಿದೆ ಎಂದು ತಿರುಗೇಟು ನೀಡಿದ್ದಾರೆ.
 
ಸೀಮಿತ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ಯಾವ ರೀತಿಯ ಸಂದೇಶ ಹೋಗಿದೆ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೀಮಿತ ದಾಳಿಯೇ ನಡೆದಿಲ್ಲ ಎಂದ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಸಂದೇಶ ಹೋಗಿಲ್ಲ ಎಂದರ್ಥ ಅಲ್ಲವೇ ಎಂದು ಪ್ರಶ್ನಿಸಿದರು.
 
ಪಾಕಿಸ್ತಾನದ ಅನೇಕ ಪತ್ರಿಕೆಗಳು ಸೀಮಿತ ದಾಳಿಯ ಬಗ್ಗೆ ಲೇಖನಗಳನ್ನು ಬರೆದಿವೆ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ನಾನು ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
 
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ನಂತರ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಏಕಾಂಗಿಯಾಗಿದೆಯೇ ಎನ್ನುವ ಭಾವನೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪಾಕಿಸ್ತಾನ ಎಲ್ಲಾ ದೇಶಗಳಿಗಿಂತ ಭಯೋತ್ಪಾದನೆಯ ನೋವು ಅನುಭವಿಸಿದೆ ಎಂದು ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವಿನಾಕಾರಣ ಕೃಷ್ಣ ಮಠದ ಹೆಸರು ಬಳಕೆ: ಬೇಸರ ವ್ಯಕ್ತಪಡಿಸಿದ ಪೇಜಾವರ್ ಶ್ರೀ