Select Your Language

Notifications

webdunia
webdunia
webdunia
webdunia

ಅಭಿವೃದ್ಧಿಗೆ ಹೊರಗಿನವರ ಅವಶ್ಯಕತೆಯಿಲ್ಲ: ಮೋದಿಗೆ ಪ್ರಿಯಾಂಕಾ ಟಾಂಗ್

ಅಭಿವೃದ್ಧಿಗೆ ಹೊರಗಿನವರ ಅವಶ್ಯಕತೆಯಿಲ್ಲ: ಮೋದಿಗೆ ಪ್ರಿಯಾಂಕಾ ಟಾಂಗ್
ರಾಯಬರೇಲಿ , ಶುಕ್ರವಾರ, 17 ಫೆಬ್ರವರಿ 2017 (18:13 IST)
ರಾಯಬರೇಲಿ ಅಭಿವೃದ್ಧಿಗೆ ಹೊರಗಿನವರ ಅವಶ್ಯಕತೆಯಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.
 
ಅಮೇಥಿ ಕ್ಷೇತ್ರ ಹಿಂದುಳಿಯಲು ಗಾಂಧಿ ಕುಟುಂಬ ಕಾರಣವಾಗಿದೆ ಎಂದು ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ, ಜಿಲ್ಲೆಯ ಅಭಿವೃದ್ಧಿಗೆ ಹೊರಗಿನವರ ಅವಶ್ಯಕತೆಯಿಲ್ಲ. ಜಿಲ್ಲೆಯಲ್ಲಿ ಬೇಕಾದಷ್ಟು ಪ್ರತಿಭಾವಂತ ಯುವಕರಿದ್ದಾರೆ. ಅವರಿಂದ ಅಮೇಥಿ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದ್ದಾರೆ.
 
ಯುಪಿಎ ಸರಕಾರ ರಾಯಬರೇಲಿ ಜಿಲ್ಲೆಯಲ್ಲಿ ಫುಡ್ ಪಾರ್ಕ್ ಮತ್ತು ರೈಲ್ವೆ ಬೋಗಿ ನಿರ್ಮಾಣ ಘಟಕ ನೀಡಿತ್ತು. ಆದರೆ, ಕೇವಲ ರಾಜಕೀಯ ಸೇಡಿಗಾಗಿ ಪ್ರಧಾನಿ ಮೋದಿ ಇತರ ಜಿಲ್ಲೆಗೆ ವರ್ಗಾಯಿಸಿದ್ದಾರೆ ಎಂದು ಕಿಡಿಕಾರಿದರು.
 
ಕೇವಲ ಭಾಷಣ ಮಾಡುವುದರಲ್ಲಿಯೇ ನಿಸ್ಸಿಮರಾಗಿರುವ ಪ್ರಧಾನಿ ಮೋದಿಯಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲಾಗದು. ಅವರು ವಾರಣಾಸಿಯನ್ನು ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎನ್ನುವ ಬಗ್ಗೆ ಉತ್ತರಿಸಲಿ ಎಂದು ಪ್ರಿಯಾಂಕಾ ಗಾಂಧಿ ಟಾಂಗ್ ನೀಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿ ಅತ್ಯಾಚಾರ, ಹತ್ಯೆ, ಭ್ರಷ್ಟಾಚಾರದಲ್ಲಿ ನಂ 1