Select Your Language

Notifications

webdunia
webdunia
webdunia
webdunia

ಯುಪಿ ಅತ್ಯಾಚಾರ, ಹತ್ಯೆ, ಭ್ರಷ್ಟಾಚಾರದಲ್ಲಿ ನಂ 1

Uttar Pradesh election
ಅಮೇಥಿ , ಶುಕ್ರವಾರ, 17 ಫೆಬ್ರವರಿ 2017 (17:17 IST)
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಎಸ್‌ಪಿ ಆಡಳಿತಾರೂಢವಾಗಿರುವ ರಾಜ್ಯ ಹತ್ಯೆ, ಅತ್ಯಾಚಾರ ಮತ್ತು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅವರು ಟೀಕಿಸಿದ್ದಾರೆ. 

ಕಾಂಗ್ರೆಸ್ ಆಕಾಶದಿಂದ ಪಾತಾಳದವರೆಗೆ ಹಗರಣಗಳನ್ನು ಮಾಡಿದೆ ಎಂದ ಅವರು ಕೈ ಮತ್ತು ಸಮಾಜವಾದಿ ಪಕ್ಷಗಳ ಮೈತ್ರಿಯನ್ನು ಭ್ರಷ್ಟಾಚಾರಿ ಪರಿವಾರದ ಮೈತ್ರಿಕೂಟ, ಒಂದು ಕಡೆ ಒಬ್ಬ ಯುವರಾಜನ ತಾಯಿ ಚಿಂತಾಗ್ರಸ್ತಳಾಗಿದ್ದರೆ, ಮತ್ತೊಂದು ಕಡೆ ಇನ್ನೊಬ್ಬ ಯುವರಾಜನ ತಂದೆ ಚಿಂತಿತರಾಗಿದ್ದಾರೆ, ಇವರಿಬ್ಬರ (ರಾಹುಲ್- ಅಖಿಲೇಶ್) ಕಾರಣದಿಂದ ಸಂಪೂರ್ಣ ಉತ್ತರ ಪ್ರದೇಶ ಚಿಂತಿತವಾಗಿದೆ ಎಂದರು.
 
ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಂದ ಲೆಕ್ಕಾಚಾರದ ವಿವರಣೆ ಕೇಳುತ್ತಾರೆ, ಮೊದಲು ನೀವು 60 ವರ್ಷಗಳ ಲೆಕ್ಕಾಚಾರ ನೀಡಿ ಎಂದು ಅವರು ಕಾಂಗ್ರೆಸ್ ಯುವರಾಜನಿಗೆ ಸವಾಲು ಹಾಕಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸುವುದೇ ನನ್ನ ಆಸೆ: ತೇಜಸ್ವಿನಿ