Select Your Language

Notifications

webdunia
webdunia
webdunia
webdunia

ಎಸ್ ಬಿಐ ಅಕೌಂಟಿನಲ್ಲಿ ದುಡ್ಡಿಲ್ಲವೇ? ದಂಡ ತೆರಲು ಸಿದ್ಧರಾಗಿ!

ಎಸ್ ಬಿಐ ಅಕೌಂಟಿನಲ್ಲಿ ದುಡ್ಡಿಲ್ಲವೇ? ದಂಡ ತೆರಲು ಸಿದ್ಧರಾಗಿ!
Mumbai , ಶನಿವಾರ, 4 ಮಾರ್ಚ್ 2017 (08:57 IST)
ಮುಂಬೈ: ಅಪನಗದೀಕರಣ ಮುಗಿದ ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಗಳ ನಿಯಮಗಳೂ ಬದಲಾಗುತ್ತಿವೆ. ಇನ್ನು ಮುಂದೆ, ಎಸ್ ಬಿಐ ಬ್ಯಾಂಕ್ ಖಾತೆ ಹೊಂದಿದವರು ಅಕೌಂಟಿನಲ್ಲಿ ಕನಿಷ್ಠ 5000 ರೂ. ಇಟ್ಟುಕೊಳ್ಳಲೇಬೇಕು. ಇಲ್ಲದಿದ್ದರೆ ದಂಡ ತೆರಬೇಕಾದೀತು!


ಇಂತಹದ್ದೊಂದು ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಯಾಗಲಿದೆ. ಮೆಟ್ರೋ ನಗರಗಳಲ್ಲಿ ಅಕೌಂಟ್ ಹೊಂದಿದವರು 5000 ರೂ. ಗ್ರಾಮೀಣ ಭಾಗಗಳಲ್ಲಿ ಖಾತೆ ಹೊಂದಿದವರು 1000 ರೂ. ಕನಿಷ್ಠ ಮೊತ್ತ ಹೊಂದಿರಬೇಕು. 5000 ಕ್ಕಿಂತ ಕಡಿಮೆಯಿದ್ದರೆ, 50 ರೂ. ದಂಡದ ಜತೆಗೆ ಸೇವಾ ತೆರಿಗೆಯನ್ನೂ ಕಟ್ಟಬೇಕು.

ಇತ್ತೀಚೆಗಷ್ಟೇ ಉಚಿತ ವಹಿವಾಟಿಗೂ ಬ್ಯಾಂಕ್ ಗಳು ಮಿತಿ ಹೇರಿದ್ದವು. ಬ್ಯಾಂಕ್ ಗಳಲ್ಲಿ ತಿಂಗಳಿಗೆ ನಾಲ್ಕು ಬಾರಿಗಿಂತ ಹೆಚ್ಚು ಹಣ ವ್ಯವಹಾರ ಮಾತ್ರವಲ್ಲದೆ, ಎಟಿಎಂನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದರೆ, ಪಿನ್ ಬದಲಾಯಿಸಿದರೆ, ಎಲ್ಲದಕ್ಕೂ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ.

ಎಸ್ ಬಿಐ ಜತೆಗೆ ಇತರ ಸಹವರ್ತಿ ಬ್ಯಾಂಕ್ ಗಳೂ ವಿಲೀನವಾಗುತ್ತಿರುವ ಕಾರಣ ಅಂತಹ ಬ್ಯಾಂಕ್ ಗಳಿಗೂ ಇದು ಅನ್ವಯವಾಗಲಿದೆ. ತನ್ನದೇ ಬ್ಯಾಂಕ್ ನಲ್ಲಿ ಗ್ರಾಹಕರನ್ನು ಇರಿಸಲು ಈ ರೀತಿಯ ನಿಯಮಗಳು ಜಾರಿಗೆ ಬರಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರನ್ನೇ ಬೆಚ್ಚಿ ಬೀಳಿಸಿತು ಪಾಪಿ ಅಳಿಯನ ಬೀಭತ್ಸ ಕೃತ್ಯ