ನವದೆಹಲಿ : ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದ್ದರು, ದೆಹಲಿಯಲ್ಲಿ ಲಾಕ್ ಡೌನ್ ಇಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಅರವಿಂದ್ ಕ್ರೇಜಿವಾಲ್ , ದೆಹಲಿಯಲ್ಲಿ 4ನೇ ಕೊರೊನಾ ಅಲೆ ಶುರುವಾಗಿದೆ. ದೆಹಲಿಯಲ್ಲಿ ಒಂದೇ ದಿನ 3500 ಮಂದಿಗೆ ಕೊರನಾ ಸೋಂಕು ತಗುಲಿದೆ. ಲಾಕ್ ಡೌನ್ ವಿಧಿಸಲು ಸರ್ಕಾರ ನಿರ್ಧಾರ ಮಾಡಿಲ್ಲ.
ಭವಿಷ್ಯದಲ್ಲಿ ಅಗತ್ಯವಿದ್ದಲ್ಲಿ ಜನರೊಂದಿಗೆ ಸಮಾಲೋಚಿಸಿದ ನಂತರ ಸರ್ಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಆದರೆ ಈಗ ಲಸಿಕೆ ನೀಡುವತ್ತ ಹೆಚ್ಚಿನ ಗಮನಹರಿಸಿದ್ದೇವೆ ಎಂದು ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಹೇಳಿದ್ದಾರೆ.