Select Your Language

Notifications

webdunia
webdunia
webdunia
Friday, 11 April 2025
webdunia

ಕೆರೆ ಜಾಗಗಳಲ್ಲಿ ಮನೆ ನಿರ್ಮಾಣ ಆದೇಶ ರದ್ದು: ಸಿಎಂ ಬೊಮ್ಮಾಯಿ

bengaluru lake cm bommai ಬೊಮ್ಮಾಯಿ ಬೆಂಗಳುರು ಕೆರೆ ಬಿಡಿಎ
bengaluru , ಶುಕ್ರವಾರ, 20 ಮೇ 2022 (14:22 IST)
ಬೆಂಗಳೂರಿನಲ್ಲಿ ಕೆರೆ ಜಾಗಗಳಲ್ಲಿ ಬಿಡಿಎ ವಸತಿ ನಿರ್ಮಾಣ ಕುರಿತ ಅಧಿಸೂಚನೆಯನ್ನು ರದ್ದುಗೊಳಿಸಿದ್ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮುರ್ತಿನಗರದ ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳಿಗೆ ಉಗಿದು ಈ ಆದೇಶ ರದ್ದು ಮಾಡುವಂತೆ ಸೂಚಿಸಿದ್ದೇನೆ ಎಂದರು.
ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ ಹಿರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ. ಯಾವುದೇ  ಅಧಿಸೂಚಿತ ಕೆರೆ ಪ್ರದೇಶದಗಳ ಮೇಲೆ ಬಡಾವಣೆಗಳನ್ನು ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದರು.
ಬೆಂಗಳೂರು ನಗರ, ಯಲಹಂಕ ತಾಲ್ಲೂಕು,ಯಲಹಂಕ ಹೋಬಳಿ, ದೊಡ್ಡಬೆಟ್ಟಹಳ್ಳಿ ಗ್ರಾಮದಲ್ಲಿನ ಜಲಾವೃತ ಪ್ರದೇಶವನ್ನು ವಸತಿ ವಲಯಕ್ಕೆ ಬದಲಾವಣೆ ಮಾಡಲು ಕೋರಿದ್ದ ಮೇರೆಗೆ  ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶರಣಾಗತಿಗೆ ಸಮಯ ಕೊಡದ ಸುಪ್ರೀಂಕೋರ್ಟ್:‌ ನವಜ್ಯೋತ್‌ ಸಿಂಗ್‌ ಸಿಧುಗೆ ಮುಖಭಂಗ