Webdunia - Bharat's app for daily news and videos

Install App

ಹನಿಮೂನ್​ಗೆ ಹೋದ ನವಜೋಡಿ ನಾಪತ್ತೆ: ಕಮರಿನಲ್ಲಿ ಗಂಡನ ಶವ ಪತ್ತೆ, ಪತ್ನಿಗಾಗಿ ಮುಂದುವರಿದ ಹುಡುಕಾಟ

Sampriya
ಭಾನುವಾರ, 8 ಜೂನ್ 2025 (11:36 IST)
Photo Courtesy X
ಇಂದೋರ್‌: ಹನಿಮೂನ್‌ಗೆಂದು ಶಿಲ್ಲಾಂಗ್‌ಗೆ ಹೋದ ನವದಂಪತಿ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಮಧ್ಯೆ ಗಂಡನ ಶವ ಕಮರಿನಲ್ಲಿ ಪತ್ತೆಯಾಗಿದೆ. ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ. 

ಇಂದೋರ್‌ನ ನವಜೋಡಿ ರಾಜಾ ರಘುಬಂಶಿ ಮತ್ತು ಸೋನಮ್ ಅವರು ಮೇ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮೇ 20ರಂದು ಹನಿಮೂನ್‌ಗೆ  ಶಿಲ್ಲಾಂಗ್ ಗೆ ತೆರಳಿದ್ದರು. ಹನಿಮೂನ್ ಎಂಜಾಯ್ ಮಾಡಲು ಹೋದ ಗಂಡ-ಹೆಂಡತಿ ಇಬ್ಬರೂ ಕಣ್ಮರೆ ಆಗಿದ್ದಾರೆ. ಆತಂಕದಲ್ಲಿದ್ದ ಕುಟುಂಬಸ್ಥರು ದೂರು ನೀಡಿದ್ದಾರೆ. 

ಕೆಲ ದಿನಗಳ ಬಳಿಕ ರಾಜಾ ರಘುಬಂಶಿ ಶವ ಪತ್ತೆಯಾಗಿತ್ತು, ಆದರೆ ಅವನ ಹೆಂಡತಿ ಇನ್ನೂ ಸಿಕ್ಕಿಲ್ಲ. ಈ ಘಟನೆಯು ಜನರನ್ನು ಬೆಚ್ಚಿಬೀಳಿಸಿದೆ. ರಾಜಾ ಅವರ ಸಹೋದರ ಬಿಪಿನ್ ರಘುಬಂಶಿ ಈಗಾಗಲೇ ಶಿಲ್ಲಾಂಗ್ ಆಡಳಿತ ಮತ್ತು ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೇಸ್ ಅನ್ನು ಸಿಬಿಐಗೆ ನೀಡುವಂತೆಯೂ ಒತ್ತಾಯ ಮಾಡಿದ್ದಾರೆ.

ರಾಜಾ ಹತ್ಯೆಯ ನಂತರ ಅವರ ಪತ್ನಿ ಸೋನಂ ಪತ್ತೆಯಾಗಿಲ್ಲ ಎಂದು ಬಿಪಿನ್ ಹೇಳಿದ್ದಾರೆ. ಸೋನಂ ಅವರನ್ನು ಕಿಡ್ನಾಪ್ ಮಾಡಿದ ಶಂಕೆ ವ್ಯಕ್ತವಾಗಿದೆ. ಆದ್ದರಿಂದ, ಸೋನಂ ಅವರನ್ನು ಆದಷ್ಟು ಬೇಗ ಹುಡುಕಿ, ಸುರಕ್ಷಿತವಾಗಿ ಮನೆ ಕರೆದುಕೊಂಡು ಬರುವಂತೆ ಒತ್ತಾಯಿಸುತ್ತಾರೆ.  ಈ ಘಟನೆಯ ತನಿಖೆಯಲ್ಲಿ ಕೇಂದ್ರ ಸರ್ಕಾರ ಮತ್ತು ಮೇಘಾಲಯ ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಬಿಪಿನ್ ಒತ್ತಾಯಿಸಿದ್ದಾರೆ.  <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಆಪರೇಷನ್ ಸಿಂಧೂರ್ ಚರ್ಚೆ ವೇಳೆ ಸಂಸತ್ತಿನಲ್ಲಿ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ವಾಗ್ಯುದ್ಧ

ಕರ್ನಾಟಕದ ಇತಿಹಾಸದಲ್ಲೇ ಇಂತಹದ್ದೊಂದು ರೈತ ವಿರೋಧಿ ಸರ್ಕಾರ ನೋಡಿಲ್ಲ: ಆರ್ ಅಶೋಕ್

ಪಹಲ್ಗಾಮ್ ದಾಳಿಕೋರರು ಪಾಕಿಸ್ತಾನದಿಂದಲೇ ಬಂದಿರುವುದಕ್ಕೆ ಏನು ಪ್ರೂಫ್: ಕೈ ನಾಯಕ ಚಿದಂಬರಂ

Operation Mahadev: ಪಹಲ್ಗಾಮ್ ಕುಕೃತ್ಯ ನಡೆಸಿದ ಮೂವರು ಶಂಕಿತ ಉಗ್ರರು ಮಟಾಷ್

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

ಮುಂದಿನ ಸುದ್ದಿ
Show comments