ನವದೆಹಲಿ: ಸರ್ಕಾರ ರಚನೆಗೆ ಕಸರತ್ತು ಮಾಡುತ್ತಿರುವ ಬಿಜೆಪಿ ನಾಯಕರು ಇಂದು ರಾತ್ರಿ ಎಲ್ಲಾ ಸ್ವ ಪಕ್ಷ ಮತ್ತು ಮೈತ್ರಿ ಪಕ್ಷದ ಸಂಸದರಿಗೆ ದೆಹಲಿಗೆ ಬರಲು ಸೂಚಿಸಿದ್ದಾರೆ.
ನಾಳೆ ಪ್ರಧಾನಿ ಮೋದಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ನೂತನ ಸರ್ಕಾರ ರಚಿಸಲು ಆನುಮೋದನೆ ಪಡೆಯಲಿದ್ದಾರೆ. ಅದಾದ ಬಳಿಕ ಪ್ರಮಾಣ ವಚನಕ್ಕೆ ಸಿದ್ಧತೆಗಳು ಆರಂಭವಾಗಲಿದೆ.
ನಿನ್ನೆಯಷ್ಟೇ ದೆಹಲಿಯಲ್ಲಿ ಸಭೆ ನಡೆಸಿ ಎನ್ ಡಿಎ ಪಕ್ಷಗಳು ಸರ್ಕಾರ ರಚಿಸುವ ತೀರ್ಮಾನ ಕೈಗೊಂಡಿದ್ದರು. ಅದರಂತೆ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರಲಿದೆ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಕೂಡಾ ಎನ್ ಡಿಎ ಜೊತೆಗಿರುವ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂಡಿಯಾ ಒಕ್ಕೂಟ ಸರಕಾರ ರಚನೆಯ ಪ್ರಯತ್ನ ಕೈ ಬಿಡಲು ತೀರ್ಮಾನಿಸಿತ್ತು.
ಇಂದು ಎನ್ ಡಿಎ ಪಕ್ಷಗಳ ಎಲ್ಲಾ ಸಂಸದರು ದೆಹಲಿಗೆ ತೆರಳಿ ಪ್ರಮಾಣ ವಚನ ಸ್ವೀಕಾರದ ಬಳಿಕ ತವರಿಗೆ ಬರಲಿದ್ದಾರೆ. ಇದಕ್ಕೆ ಮೊದಲು ಪ್ರಧಾನಿ ಮೋದಿ ಎಲ್ಲರನ್ನೂ ಭೇಟಿಯಾಗುವ ಸಾಧ್ಯತೆಯಿದೆ