Select Your Language

Notifications

webdunia
webdunia
webdunia
webdunia

ನಾಸಿಕ್: ಐಎಎಸ್ ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ 1 ಕೋಟಿ ವಂಚನೆ

Nasik Fake IAS Officer, Gaurav Ramacheshwara Mishra, Money Fraud,

Sampriya

ನಾಸಿಕ್ , ಸೋಮವಾರ, 28 ಅಕ್ಟೋಬರ್ 2024 (18:03 IST)
ನಾಸಿಕ್(ಮಹಾರಾಷ್ಟ್ರ): ಐಪಿಎಸ್ ಅಧಿಕಾರಿಯಂತೆ ನಟಿಸಿ, ಉದ್ಯಮಿಯೊಬ್ಬರಿಗೆ ₹1 ಕೋಟಿ ವಂಚಿಸಿದ ಘಟನೆ ನಾಸಿಕ್‌ನಲ್ಲಿ ಬೆಳಕಿಗೆ ಬಂದಿದ್ದು, ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಯನ್ನು ಗೌರವ್ ರಾಮಚೇಶ್ವರ ಮಿಶ್ರಾ ಎಂದು ಗುರುತಿಸಲಾಗಿದೆ.ಪೊಲೀಸ್ ಸಮವಸ್ತ್ರವನ್ನು ಧರಿಸಿ, ನಕಲಿ ಗುರುತಿನ ಚೀಟಿ ಹಾಗೂ ಪೊಲೀಸ್‌ ವಾಹನ ಬಳಸುತ್ತಿದ್ದ ಆರೋಪಿಗೆ ನಾಸಿಕ್‌ನ ಉದ್ಯಮಿಯೊಬ್ಬರ ಪರಿಚಯವಾಗಿದೆ.

ದೂರಿನಲ್ಲಿ ಸಂತ್ರಸ್ತ, ರೈಲ್ವೆ ಇಲಾಖೆಯ ಟೆಂಡರ್‌ ಕೊಡಿಸುವ ನೆಪದಲ್ಲಿ ಸುಮಾರು ₹1 ಕೋಟಿ ಪಡೆದು, ವಂಚಿಸಿರುವುದಾಗಿ ಉಲ್ಲೇಖಿಸಿದ್ದಾರೆ.

ವಂಚನೆ ತಿಳಿದು ಉದ್ಯಮಿ ಹಣ ವಾಪಾಸ್ ನೀಡುವಂತೆ ಕೇಳಿಕೊಂಡಿದ್ದಾನೆ. ಚರ್ಚೆಗೆ  ಹೋಟೆಲ್‌ಗೆ ಕರೆಸಿಕೊಂಡ ಆರೋಪಿ, ತಲೆಗೆ ಬಂದೂಕು ಹಿಡಿದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಣ ನೀಡದಿದ್ದರೆ, ಪೊಲೀಸ್‌ ಇಲಾಖೆಯಲ್ಲಿನ ಅಧಿಕಾರಿಗಳ ಪ್ರಭಾವ ಬಳಸಿ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದನು ಎಂದು ದೂರುದಾರ ತಿಳಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನದಾತರ ಭೂಮಿಗೆ ಕನ್ನ ಹಾಕಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ