Select Your Language

Notifications

webdunia
webdunia
webdunia
webdunia

ಮುಂಬೈ: ಮೊಬೈಲ್‌ ಕದ್ದನೆಂಬ ಶಂಕೆಯಿಂದ ಯುವಕನ ಹತ್ಯೆ ಮಾಡಿದ ಗುಂಪು

Mumbai Thane, Mobile Stealing, Mohammad Rahmat Shah No More,

Sampriya

ಮುಂಬೈ , ಶನಿವಾರ, 26 ಅಕ್ಟೋಬರ್ 2024 (20:23 IST)
ಮುಂಬೈ:  ಮೊಬೈಲ್ ಕಳ್ಳತನ ಶಂಕೆಯ ಮೇಲೆ 25 ವರ್ಷದ ಯುವಕನ ಮೇಲೆ ಗುಂಪೊಂದು ಮಾರಾಣಾಂತಿಕ ಹಲ್ಲೆ ಮಾಡಿ ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಯುವಕನನ್ನು ಮೊಹಮ್ಮದ್ ರಹ್ಮತ್ ಶಾ ಎಂದು ಗುರುತಿಸಲಾಗಿದೆ.

ಗುರುವಾರ ಭಿವಂಡಿಯಲ್ಲಿ ಮೊಬೈಲ್ ಕಳ್ಳತನದ ಶಂಕೆಯಲ್ಲಿ 25 ವರ್ಷದ ಯುವಕನ ಮೇಲೆ ಗಂಭೀರ ಹಲ್ಲೆ ಮಾಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ರಹಮತ್‌ನನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದುಕೊಂಡು  ಹೋದರು. ಆದರೆ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಈ ಪ್ರಕರಣ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿನಾಯಕ ಗಾಯಕ್ವಾಡ್ ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ 2ವರ್ಷ ಪೂರ್ಣ, ಮನೆಯಲ್ಲಿ ಸಂಭ್ರಮಾಚಾರಣೆ