Select Your Language

Notifications

webdunia
webdunia
webdunia
webdunia

ಟ್ವಿಟ್ಟರ್‍‍ನಲ್ಲಿ ನರೇಂದ್ರಮೋದಿ ಜನಪ್ರಿಯತೆ ಹೆಚ್ಚಳ

ಪ್ರಧಾನಮಂತ್ರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಭಾರತೀಯನೆಂಬ ಗೌರವವನ್ನು ಉಳಿಸಿಕೊಂಡಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಹಿಂಬಾಲಕರ ಪ್ರಮಾಣ ಶೇ. 52ರಷ್ಟು ಹೆಚ್ಚಾಗಿದೆ. 

ಮೋದಿ ಅವರಿಗೆ 2016ರಲ್ಲಿ 2.46 ಕೋಟಿ ಫಾಲೋವರ್‌ಗಳಿದ್ದರು. 2017ರ ಡಿಸೆಂಬರ್‌ 4ಕ್ಕೆ ಅದು 3.75 ಕೋಟಿಗೇರಿದೆ. ಇದೇ ಅವಧಿಯಲ್ಲಿ ಭಾರತ ಕ್ರಿಕೆಟ್‍‍ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಜನಪ್ರಿಯತೆ ಶೇ. 61ರಷ್ಟು ಹೆಚ್ಚಾಗಿದ್ದು, ಕಳೆದ ವರ್ಷ 1.29 ಕೋಟಿ ಫಾಲೋವರ್‌ಗಳಿದ್ದರೆ ಈಗ 2.08 ಕೋಟಿಗೇರಿದೆ.

ಸಚಿನ್‌ ತೆಂಡೂಲ್ಕರ್‌ ಅವರ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ ಈ ವರ್ಷ ಶೇಕಡಾ 56ರಷ್ಟು ಹೆಚ್ಚಿದೆ. ಸಚಿನ್‌ ತೆಂಡೂಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ಇದೇ ಮೊದಲ ಬಾರಿಗೆ ಟ್ವಿಟರ್‌ ಜನಪ್ರಿಯತೆಯಲ್ಲಿ ಟಾಪ್‌ 10 ಹಂತಕ್ಕೆ ಲಗ್ಗೆ ಇಟ್ಟಿದ್ದು ವಿಶೇಷವಾಗಿದೆ.

ನಟರಾದ ಶಾರುಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಅವರ ಫಾಲೋವರ್‌ಗಳ ಸಂಖ್ಯೆ ಕೂಡ ಶೇಕಡಾ 40ರಷ್ಟು ಹೆಚ್ಚಾಗಿದೆ. ಶಾರುಖ್‌ ಖಾನ್‌ಗೆ 3.09 ಕೋಟಿ ಫಾಲೋವರ್‌ಗಳಿದ್ದರೆ, ಸಲ್ಮಾನ್‌ ಖಾನ್‌ಗೆ 2.85 ಕೋಟಿ ಫಾಲೋವರ್‌ಗಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕ ಸುರೇಶಕುಮಾರ್‍‍ಗೆ ಟಿಕೆಟ್ ನೀಡದಂತೆ ಮನವಿ?